ಮೈತ್ರಿ ಖಾತ್ರಿಗೆ ಪುಷ್ಠಿ ನೀಡುತ್ತಿದೆ ಜೆಡಿಎಸ್-ಬಿಜೆಪಿಯ ಬೆಳವಣಿಗೆ: ಇದರಿಂದ ದಳಕ್ಕೆ ಲಾಭ ಏನು ?
ಲೋಕಸಭೆ ಚುನಾವಣೆಗೆ ಜೆಡಿಎಸ್ -ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಖಾತ್ರಿಯಾದಂತೆ ಕಾಣುತ್ತಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಪಕ್ಕಾ ಆದಂತೆ ಕಾಣುತ್ತಿದೆ. ದಳಪತಿಗಳಾದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ನಡೆಗಳು 2024ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಬಿಜೆಪಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಪ್ರಧಾನಿ ಮೋದಿ ಆಹ್ವಾನ ನೀಡಿದ ಕಾರ್ಯಕ್ರಮಗಳಿಗೆಲ್ಲಾ ದೇವೇಗೌಡರು ಹೋಗುತ್ತಿದ್ದಾರೆ. ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರಕ್ಕೆ ದಳಪತಿಗಳು ಮುಂದಾದ್ರ ಎಂಬ ಪ್ರಶ್ನೆಈಗ ಕಾಡತೊಡಗಿದೆ. ಫಾರುಖ್ ಅಬ್ದುಲ್ಲಾ ಇತ್ತಾ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದಾರೆ. ಇದರ ಹಿಂದೆ ಇದೆಯಾ ರಣತಂತ್ರ ಎಂಬ ಅನುಮಾನ ಈಗ ಮೂಡಿದೆ.
ಇದನ್ನೂ ವೀಕ್ಷಿಸಿ: ಮಹಾರಾಷ್ಟ್ರದಲ್ಲಿ ಕಿಚ್ಚು ಹೊತ್ತಿಸಿದ 'ಜೌರಂಗಜೇಬ್' ಸ್ಟೇಟಸ್: ಬಲಪಂಥೀಯ ಬಂದ್ ಖಂಡಿಸಿ ವಿರೋಧಿಗಳಿಂದ ಪ್ರತಿಭಟನೆ