Happy Birthday Ambareesh: ಅಂಬಿ ಸಮಾಧಿ ಮೇಲೆ ಅಭಿಷೇಕ್-ಅವಿವಾ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ
ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನವನ್ನು ಇಂದು (ಮೇ 29) ಆಚರಿಸಲಾಗುತ್ತಿದೆ. ಪುತ್ರ ಅಭಿಷೇಕ್ ಮತ್ತು ಅವಿವಾ ಬಿಡ್ಡಪ್ಪ ಮದುವೆ ಆಮಂತ್ರಣ ಪತ್ರಿಕೆಯನ್ನು ಅಂಬಿ ಸಮಾಧಿ ಮೇಲಿಟ್ಟು ಪೂಜೆ ಮಾಡಲಾಯಿತು.
ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನವನ್ನು ಇಂದು (ಮೇ 29) ಆಚರಿಸಲಾಗುತ್ತಿದೆ. ಅಭಿಮಾನಿಗಳು ಹಾಗೂ ಕುಟುಂಬದವರು ಅಂಬಿ ನೆನಪಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕುಟಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ರೆಬಲ್ ಸ್ಟಾರ್ ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ಕೆಪಿ ಶ್ರೀಕಾಂತ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇದೇ ವೇಳೆ ಪುತ್ರ ಅಭಿಷೇಕ್ ಮತ್ತು ಅವಿವಾ ಬಿಡ್ಡಪ್ಪ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಮಾಡಲಾಯಿತು. ಅಂಬಿ ಸಮಾಧಿ ಮೇಲೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಮಾಡಲಾಯಿತು.