ಈ ವರ್ಷದ ಕನ್ನಡದ ಜನಪ್ರಿಯ ಸ್ಟಾರ್ ಯಾರು?: ಸಮೀಕ್ಷೆ ಏನ್ ಹೇಳುತ್ತೆ?

2022ರಲ್ಲಿ ಕನ್ನಡದ ಅತ್ಯಂತ ಜನಪ್ರಿಯ ಹೀರೋ ಯಾರು ಹಾಗೂ ಟಾಪ್ 5 ಸ್ಟಾರ್ಸ್ ಪಟ್ಟಿಯಲ್ಲಿ ಯಾರು ಇದ್ದಾರೆ ಎಂದು ಸಮೀಕ್ಷೆ ಹೊರ ಬಿದ್ದಿದೆ.
 

Share this Video
  • FB
  • Linkdin
  • Whatsapp

ಕಾಂತಾರ ಸಿನಿಮಾ ಬಳಿಕ ಭಾರತೀಯ ಚಿತ್ರರಂಗ ರಿಷಬ್ ಶೆಟ್ಟಿ ಬಗ್ಗೆ ಮಾತಾಡುತ್ತಿದ್ದಾರೆ. ಹಾಗಾದ್ರೆ ಶೆಟ್ರು ಕನ್ನಡದ ಜನಪ್ರಿಯ ನಟರ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದ್ದಾರೆ ಅಂತ ಕೇಳಿದ್ರೆ, ಅವರಿಗೆ ಐದನೇ ಸ್ಥಾನ ಸಿಕ್ಕಿದೆ. ಇನ್ನು ರಿಷಬ್ ಶೆಟ್ಟಿಗಿಂತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಂದು ಹೆಜ್ಜೆ ಮುಂದಿದ್ದು, 777 ಚಾರ್ಲಿ ಸಿನಿಮಾದ ದೊಡ್ಡ ಗೆಲುವು ಕನ್ನಡದ ಜನಪ್ರಿಯ ನಟರ ಪಟ್ಟಿಯಲ್ಲಿ ಅವರನ್ನು ನಾಲ್ಕನೇ ಸ್ಥಾನಕ್ಕೇರಿಸಿದೆ. ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ವರ್ಷ ಅತ್ಯಂತ ಹೆಚ್ಚು ಜನಪ್ರಿಯ ನಟರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಕನ್ನಡದ ಜನಪ್ರಿಯ ಸ್ಟಾರ್ ನಟನ ಪಟ್ಟಿಯಲ್ಲಿ ಯಶ್ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಕೆಜಿಎಫ್-2 ಸಿನಿಮಾ ಗೆದ್ದ ಮೇಲೆ ಅವರಿಗೆ ಈ ಪಟ್ಟ ಸಿಕ್ಕಿದೆ. Ormax Media 2022ರ ಕನ್ನಡದ ಪಾಪ್ಯೂಲರ್ ಸ್ಟಾರ್ ಸಮೀಕ್ಷೆ ನಡೆಸಿದ್ದು, ಯಶ್ ಹೆಸರು ಲೀಸ್ಟ್'ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

Exclusive Interview ಈವರೆಗೆ ಇಂಥಾ ಪಾತ್ರ ಮಾಡಿಲ್ಲ: ಅನಂತ್‌ನಾಗ್‌

Related Video