Exclusive Interview ಈವರೆಗೆ ಇಂಥಾ ಪಾತ್ರ ಮಾಡಿಲ್ಲ: ಅನಂತ್‌ನಾಗ್
ಸಂಜಯ್ ಶರ್ಮಾ ನಿರ್ದೇಶನ, ರಾಜೇಶ್ ಶರ್ಮಾ ನಿರ್ಮಾಣದ ಹೊಸ ಬಗೆಯ ಚಿತ್ರ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’. ಇದರಲ್ಲಿ ಅನಂತ್‌ನಾಗ್ ಅವರದು ದುಷ್ಟತನದ ಜೊತೆಗೆ ಕ್ರಿಯೇಟಿವಿಟಿಯೂ ಬೆರೆತ ಪಾತ್ರ. ಪಾತ್ರದ ಬಗ್ಗೆ ಅನಂತ್‌ನಾಗ್ ಮಾತುಗಳು.
- ತಿಮ್ಮಯ್ಯ ಮತ್ತು ತಿಮ್ಮಯ್ಯ ಸಿನಿಮಾದ ಸ್ಕ್ರೀನ್ ಪ್ಲೇ ಮೊದಲ ರೀಡಿಂಗ್‌ನಲ್ಲೇ ಇಷ್ಟವಾಯಿತು. ಆದರೆ ನಾನು ಈ ಪಾತ್ರ ಮಾಡಬೇಕು ಅಂದಾಗ ಮತ್ತೊಮ್ಮೆ ವಿವರವಾಗಿ ಸ್ಕಿ್ರಪ್‌್ಟಓದಿದೆ. ಯಾಕೋ ಅಳುಕಾಯಿತು. ಯಾಕೆಂದರೆ ಇದು ಸರಳ ಪಾತ್ರ ಅಲ್ಲ.
- ಸೀನಿಯರ್ ತಿಮ್ಮಯ್ಯನ ಪಾತ್ರದಲ್ಲಿ ನೆಗೆಟಿವ್ ಶೇಡ್ ಇದೆ. ಆತ ದುಷ್ಟ, ಅಲೆಮಾರಿ, ಅಹಂಕಾರಿ, ಸ್ವಾರ್ಥದಿಂದ ಬದುಕಿದ್ದಾನೆ. ಇನ್ನೊಬ್ಬರನ್ನು ಹೀಯಾಳಿಸ್ತಾನೆ, ಅದನ್ನು ಹಾಸ್ಯಪ್ರಜ್ಞೆ ಅಂತ ಬೇಕಿದ್ದರೂ ಹೇಳಬಹುದು. ನನ್ನ ಈವರೆಗಿನ ಸಿನಿಮಾ ಜರ್ನಿಯಲ್ಲಿ ಇಂಥದ್ದೊಂದು ಪಾತ್ರ ಮಾಡಿಲ್ಲ, ಈಗ ಮಾಡೋದಾ ಬೇಡವಾ ಅಂತ ಗೊಂದಲ. ಮಾಡಿದರೆ ಖಂಡಿತಾ ಚಾಲೆಂಜಿಂಗ್ ಆಗಿರುತ್ತೆ ಅಂತ ಗೊತ್ತಿತ್ತು. ಆದರೆ ಈ ನೆಗೆಟಿವ್‌ನ ಪಾಸಿಟಿವ್ ಮಾಡೋದೇ ಚಾಲೆಂಜಿಂಗ್ ಆಗಿತ್ತು. ಕೊನೆಗೂ ಧೈರ್ಯ ಮಾಡಿದೆ.
- ಮಡಿಕೇರಿಯಲ್ಲಿರುವ ಈ ಅಹಂಕಾರಿ ಮುದುಕನ ಬದುಕಲ್ಲಿ ಮೊಮ್ಮಗ ಬಂದಾಗ ಏನಾಗುತ್ತೆ ಅನ್ನೋದು ಕಥೆ. ಆ ಮೊಮ್ಮಗನನ್ನು ತಾತ 30 ವರ್ಷಗಳ ನಂತರ ನೋಡ್ತಾನೆ. ಮೊಮ್ಮಗ ಈ ಕಾಲದವನು, ದೇಶ, ವಿದೇಶ ಸುತ್ತಿದವನು. ಆದರೆ ಈತ ತಂದೆಯನ್ನು ಕಳೆದುಕೊಂಡಿದ್ದಾನೆ, ಬೆಕ್ಕಿನಂಥಾ ತಾತನ ಮುಂದೆ ಈ ಮೊಮ್ಮಗನ ಪ್ರಾಣ ಸಂಕಟ.
ಹಿರಿಯ ನಟ ಅನಂತ್‌ನಾಗ್‌ಗೆ ಗೌರವ ಡಾಕ್ಟರೇಟ್ ಪ್ರದಾನ
- ಈ ದುಷ್ಟಮುದುಕನಿಗೆ ಸರಸ್ವತಿ ಒಲಿದಿದ್ದಾಳೆ. ಆತ ಟ್ರಂಪೆಟ್ ನುಡಿಸ್ತಾನೆ. ಪಾಶ್ಚಾತ್ಯ ಹಾಡುಗಳ ಜೊತೆಗೆ ಕರ್ನಾಟಕ ಸಂಗೀತ ನುಡಿಸೋದೂ ಗೊತ್ತು. ವೈನ್ ಟೇಸ್ಟಿಂಗ್‌ನಲ್ಲೂ ಈತ ಪಂಟ.
- ಅವನೆಂಥಾ ದುಷ್ಟನೇ ಆಗಿದ್ದರೂ ಆತನನ್ನು ಮಟ್ಟಹಾಕಲೊಬ್ಬ ಬಂದೇ ಬರ್ತಾನೆ ಅನ್ನೋ ನಂಬಿಕೆ ಇದೆಯಲ್ಲಾ, ಆ ನಂಬಿಕೆ ಸಿನಿಮಾದಲ್ಲೂ ವರ್ಕೌಟ್ ಅಗುತ್ತೆ.
ನಾನು ಮೂಲತಃ ಡಾಕ್ಯುಮೆಂಟರಿ ಮಾಡಿಕೊಂಡು ಬಂದವನು. ಮುಚ್ಚುತ್ತಿರುವ ಕ್ಲಾಸ್ ಕೆಫೆ ಮತ್ತು ಬೇಕರಿಗಳ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡುವಾಗ ಅಲ್ಲೊಂದು ತಾತ-ಮೊಮ್ಮಗನಿಗೆ ಸಂಬಂಧಿಸಿದ ಅನುಭವವಾಯ್ತು. ಅದೇ ಕಥೆಯಾಗಿ ಆಗ್ರ್ಯಾನಿಕ್ ಆಗಿ ಬೆಳೆಯುತ್ತಾ ಹೋಯ್ತು. ಅನಂತ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ನಾನು ಈ ಪಾತ್ರವನ್ನು ಅವರಿಗಾಗಿಯೇ ಮಾಡಿದ್ದು. ತೆರೆ ಮೇಲೆ ಅವರು ಪಾತ್ರವಾಗಿ ಜೀವಿಸಿದ್ದನ್ನು ಥಿಯೇಟರ್‌ನಲ್ಲೇ ನೋಡಬೇಕು. ಹಾಡುಗಳು ನಿರೂಪಣೆಯ ಭಾಗವಾಗಿ ಬರುತ್ತದೆ. ಕೆಲವೊಂದು ಕಡೆ ಕೊಡವ ಭಾಷೆ ಬಳಕೆ ಆಗಿದೆ.
- ಸಂಜಯ್ ಶರ್ಮಾ, ನಿರ್ದೇಶಕ
- 2 ಗಂಟೆ 15 ನಿಮಿಷಗಳ ಈ ಸಿನಿಮಾದಲ್ಲಿ ಭಾವುಕತೆ ಇದೆ, ಹಾಸ್ಯ ಇದೆ, ಮೌಲ್ಯಗಳಿವೆ. ವ್ಯಂಗ್ಯ ಇದೆ
ಟ್ರಂಪೆಟ್ ನುಡಿಸಿದ ಅನುಭವ ವಿಶೇಷವಾಗಿತ್ತು!
ಈ ಸಿನಿಮಾದಲ್ಲಿ ನಾನು ಟ್ರಂಪೆಟ್ ಕಲಾವಿದ. ನನಗೆ ಕೊಳಲು ನುಡಿಸಿ ಗೊತ್ತಿತ್ತು. ಟ್ರಂಪೆಟ್‌ಗೆ ಕೊಳಲಿನ ಜೊತೆ ಹೋಲಿಕೆ ಇದ್ದರೂ ವ್ಯತ್ಯಾಸಗಳೂ ಬಹಳ ಇವೆ. ಹೀಗಾಗಿ ಟ್ರಂಪೆಟ್ ನುಡಿಸುವವರನ್ನು ಕರೆಸಿದ್ದೆ. ಅವರಿಗೆ ಕೊಳಲಿನಲ್ಲಿ ನನ್ನ ಜ್ಞಾನದ ಬಗ್ಗೆ ಹೇಳಿದೆ, ಅವರು ಟ್ರಂಪೆಟ್ ನುಡಿಸುವ ಕೆಲವು ಸೂಕ್ಷ್ಮಗಳನ್ನು ಹೇಳಿದರು. ಈ ಟ್ರಂಪೆಟ್ ಬಾರಿಸುವ ಪ್ರಸಂಗ ಸಿನಿಮಾದಲ್ಲಿ ಸ್ವಾರಸ್ಯಕರವಾಗಿ ಬಂದಿದೆ.
Anant Nag Interview ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಶಂಕರ್ ಇದ್ರೆ ರಿಷಬ್ ಸಾಧನೆಯನ್ನು ಮೆಚ್ಚಿಕೊಳ್ತಿದ್ದ!
ರಿಷಬ್ ಶೆಟ್ಟಿನಿರ್ದೇಶನದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ನಲ್ಲಿ ನಟಿಸಿದ್ದು ಒಂದೊಳ್ಳೆ ಅನುಭವ. 14 ನಿಮಿಷಗಳ ಕೋರ್ಚ್ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಅವರು ಶೂಟ್ ಮಾಡಿದ್ದರು. ಶೂಟಿಂಗ್ ವೇಳೆ ರಿಷಬ್ ನಾನು ಮಾಲ್ಗುಡಿ ಡೇಸ್ ನೋಡಿಕೊಂಡು ಬೆಳೆದವ ಅನ್ನುತ್ತಾ ಇದ್ದ. ಇದೀಗ ಅವನ ಕಾಂತಾರ ಬೆಳೆದ ರೀತಿ ನೋಡಿ ಬಹಳ ಹೆಮ್ಮೆ ಅನಿಸುತ್ತೆ. ಆದರೆ ನಮ್ಮವರೇ ನಮ್ಮ ನೆಲದ ಈ ಸಿನಿಮಾಕ್ಕೆ ಅಪಸ್ವರದ ಮಾತಾಡಿದರು. ಶಂಕರ್‌ನಾಗ್ ಇದ್ದಿದ್ದರೆ ಈ ಸಾಧನೆ ಕಂಡು ಖಂಡಿತಾ ಮೆಚ್ಚಿಕೊಳ್ತಿದ್ದ.