Pet birthday: ನಾಯಿ ಸಾಕಲು ಬಿಡದ್ದಕ್ಕೆ ಮನೆ ಬಿಟ್ಟು ಬಂದರು..! ಶ್ವಾನದ ಬರ್ತ್‌ಡೇಗೆ ಸ್ಪೆಷಲ್ ಬಿರಿಯಾನಿ

ಶಿವಮೊಗ್ಗ: ವ್ಯಕ್ತಿಯೊಬ್ಬರು ಪ್ರೀತಿಯ ಶ್ವಾನ ದ ಬರ್ತ್‌ಡೇ ಆಚರಿಸಿ ಭರ್ಜರಿ ಬಿರಿಯಾನಿ ಹಂಚಿದ್ದಾರೆ. ಶ್ವಾನ ಪ್ರಿಯರೊಬ್ಬರು ಶಿವಮೊಗ್ಗದಲ್ಲಿ ತಮ್ಮ ಪ್ರೀತಿಯ ನಾಯಿಯ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

Share this Video
  • FB
  • Linkdin
  • Whatsapp

ಶಿವಮೊಗ್ಗ: ವ್ಯಕ್ತಿಯೊಬ್ಬರು ಪ್ರೀತಿಯ ಶ್ವಾನ ದ ಬರ್ತ್‌ಡೇ ಆಚರಿಸಿ ಭರ್ಜರಿ ಬಿರಿಯಾನಿ ಹಂಚಿದ್ದಾರೆ. ಶ್ವಾನ ಪ್ರಿಯರೊಬ್ಬರು ಶಿವಮೊಗ್ಗದಲ್ಲಿ ತಮ್ಮ ಪ್ರೀತಿಯ ನಾಯಿಯ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಪೆಂಡಾಲ್ ಹಾಕಿ ಟೇಸ್ಟಿ ಕೇಕ್ ತರಿಸಿ ಬರ್ತ್‌ಡೇ ಆಚರಿಸಿದ್ದಾರೆ. ಗೆಳೆಯರಿಗೆಲ್ಲ ಬಿರಿಯಾನಿ ಊಟ ಹಾಕಿದ್ದಾರೆ. ಶಿವಮೊಗ್ಗದ ಹೊರವಲಯದ ಮೊಹಮ್ಮದ್ ಅಯಾಝ್ ಸೈಬಿರಿಯನ್ ಹಸ್ಕಿ ತಳಿಯ ನಾಯಿಯೊಂದನ್ನು ಸಾಕಿದ್ದಾರೆ. ಅದರ ಹೆಸರು ಟೈಸನ್ ಎಂದು ಹೆಸರಿಟ್ಟಿದ್ದಾರೆ. 

ಪ್ರೀತಿಯ ಶ್ವಾನ 'ಗೋಪಿ' ಯ ಬರ್ತಡೇ ಆಚರಿಸಿದ ಸುಧಾಮೂರ್ತಿ..!

ಜನವರಿ 13ರಂದು ಟೈಸನ್ ಮೊದಲ ಹುಟ್ಟುಹಬ್ಬ. ಸುಮಾರು 150 ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದಾರೆ. ಸುಮಾರು 13 ಸಾವಿರ ಬೆಲೆಯ ಮೆತ್ತನೆಯ ಹಾಸಿಗೆಯನ್ನು ನಾಯಿಗಾಗಿ ಖರೀದಿಸಿ ತಂದಿದ್ದಾರೆ. ಟೈಸನ್‌ಗಾಗಿ ಇವರು ಮನೆಯಿಂದ ಹೊರಗೆ ಬಂದು ಬದುಕುತ್ತಿದ್ದಾರೆ. ಮನೆಯಲ್ಲಿ ನಾಯಿಗಳನ್ನು ಸಾಕಲು ಅನುಮತಿ ಇಲ್ಲ, ಹಾಗಾಗಿ ಅವರು ಪ್ರತ್ಯೇಕವಾಗಿ ಬದುಕುತ್ತಿದ್ದಾರೆ.

Related Video