Asianet Suvarna News Asianet Suvarna News

JDS ಶಾಸಕರನ್ನು ಸೆಳೆಯಲು ಜಮೀರ್ ಸೀಕ್ರೆಟ್ ಆಪರೇಷನ್; ದಳಪತಿಗಳಿಗೆ ಮತ್ತೆ ಕಾದಿದ್ಯಾ ಶಾಕ್..?

ಬಿಜೆಪಿ ಹಾಗೂ ಕಾಂಗ್ರೆಸ್‌ ನಾಲ್ಕನೇ ಸ್ಥಾನಕ್ಕೆ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಜೆಡಿಎಸ್ ಶಾಸಕರನ್ನು ಸೆಳೆಯಲು ಜಮೀರ್ ಸೀಕ್ರೆಟ್ ಆಪರೇಷನ್ ಮಾಡಿದ್ರಾ?  ದಳಪತಿಗಳಿಗೆ ಮತ್ತೆ ಕಾದಿದ್ಯಾ ಶಾಕ್..?
 

ಬೆಂಗಳೂರು, (ಮೇ.31): ಕರ್ನಾಟಕ ರಾಜ್ಯಸಭೆ ಚುನಾವಣೆಯಲ್ಲಿ 4ನೇ ಸ್ಥಾನಕ್ಕಾಗಿ ಭರ್ಜರಿ ಕದನ ಶುರುವಾಗಿದ್ದು, ಯಾರು ಗೆಲ್ಲುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.ಬಿಜೆಪಿ ಎರಡು ಸ್ಥಾನ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಪಡೆಯಲಿದೆ. ಆದರೆ 4ನೇ ಸ್ಥಾನಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಥಾನಗಳ ಕೊರತೆ ಎದುರಾಗಲಿದೆ. 

ರಾಜ್ಯಸಭೆಯ 4ನೇ ಸ್ಥಾನಕ್ಕೆ 3 ಪಕ್ಷಗಳಿಂದ ಪೈಪೋಟಿ..!

ಎರಡು ರಾಷ್ಟೀಯ ಪಕ್ಷಗಳು ತಮ್ಮ ಸ್ವಸಾಮರ್ಥ್ಯದಿಂದ ಗೆಲ್ಲಬಹುದಾದ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಜೆಡಿಎಸ್ ತಮ್ಮ ಬಳಿಯಲ್ಲಿರುವ ಶಾಸಕರ ಜೊತೆ 14 ಶಾಸಕರ ಕೊರತೆಯನ್ನು ಎದುರಿಸುತ್ತಿದ್ದು ನಾಲ್ಕನೇ ಸ್ಥಾನವನ್ನು ವಶಕ್ಕೆ ಪಡೆದುಕೊಳ್ಳಲು ಹಲವು ತಂತ್ರಗಳೊಂದಿಗೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.  ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಲ್ಕನೇ ಸ್ಥಾನಕ್ಕೆ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಜೆಡಿಎಸ್ ಶಾಸಕರನ್ನು ಸೆಳೆಯಲು ಜಮೀರ್ ಸೀಕ್ರೆಟ್ ಆಪರೇಷನ್ ಮಾಡಿದ್ರಾ?  ದಳಪತಿಗಳಿಗೆ ಮತ್ತೆ ಕಾದಿದ್ಯಾ ಶಾಕ್..?

Video Top Stories