ಡ್ರಗ್ ರಾಣಿ ಸಂಜನಾ, ಕ್ಯಾಸಿನೋ ಕಿಲಾಡಿ ಶೇಖ್, ಜಮೀರ್ ಭಾಯ್ ಬುಡಕ್ಕೆ ಬೆಂಕಿ..!

ಸಂಬರಗಿ ಆರೋಪಕ್ಕೆ ಜಮೀರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನ ಭೇಟಿಯಾಗಿ, 'ನನಗೂ ಈ ಡ್ರಗ್ ದಂಧೆಗೂ ಸಂಬಂಧವಿಲ್ಲ. ನನ್ನ ಮೇಲಿನ ರಾಜಕೀಯ ದ್ವೇಷಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ' ಎಂದು ವಿವರಣೆ ನೀಡಿದ್ದಾರೆ.  ಇಲ್ಲಿ ಸಂಬರಗಿ ಆರೋಪ, ಜಮೀರ್ ಸಿದ್ದರಾಮಯ್ಯ ಭೇಟಿ ರಾಜಕೀಯ ತಿರುವು ಪಡೆದುಕೊಳ್ಳುವತ್ತ ಸಾಗುತ್ತಿದೆ. ಈ ಬಗ್ಗೆ ಇನ್‌ಸೈಡ್‌ ಪಾಲಿಟಿಕ್ಸ್ ಇಲ್ಲಿದೆ ನೋಡಿ..!

First Published Sep 12, 2020, 2:41 PM IST | Last Updated Sep 12, 2020, 2:41 PM IST

ಬೆಂಗಳೂರು (ಸೆ. 12): ಡ್ರಗ್ಸ್ ದಂಧೆಯ ಉರುಳು ಒಬ್ಬೊಬ್ಬರಿಗೆ ಸುತ್ತಿಕೊಳ್ಳುತ್ತಿದೆ. ಸಂಬರಗಿ, ಜಮೀರ್‌ ಭಾಯ್ ನಡುವಿನ ಪೈಟ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. 

'ಜಮೀರ್ ಅಹ್ಮದ್ ಕೊಲಂಬೋದ ಕ್ಯಾಸಿನೋದಲ್ಲಿ ಜೂಜಾಡಿದ್ದಾರೆ. ಇದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ಕಳೆದ ವರ್ಷ ಜೂನ್‌ನಲ್ಲಿ ಕೊಲಂಬೋಗೆ ತೆರಳಿದ್ದಾರೋ ಇಲ್ವೋ ತಿಳಿಸಲಿ. ಪಾಸ್‌ಪೋರ್ಟ್ ಅಧಿಕಾರಿಗಳ ತನಿಖೆಗೆ ಸಹಕರಿಸಲಿ' ಎಂದು ಸವಾಲೆಸಿದ್ದಾರೆ. 

ಸಂಜನಾ ಮದುವೆ ಹಿಂದೆ ಇನ್ನೊಂದು ಮಾಫಿಯಾ; ಡ್ರಗ್ ಮಾಫಿಯಾಗೆ ಇನ್ನೊಂದು ಟ್ವಿಸ್ಟಾ?

ಇನ್ನೊಂದು ಕಡೆ ಜಮೀರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನ ಭೇಟಿಯಾಗಿ, 'ನನಗೂ ಈ ಡ್ರಗ್ ದಂಧೆಗೂ ಸಂಬಂಧವಿಲ್ಲ. ನನ್ನ ಮೇಲಿನ ರಾಜಕೀಯ ದ್ವೇಷಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ' ಎಂದು ವಿವರಣೆ ನೀಡಿದ್ದಾರೆ.  ಇಲ್ಲಿ ಸಂಬರಗಿ ಆರೋಪ, ಜಮೀರ್ ಸಿದ್ದರಾಮಯ್ಯ ಭೇಟಿ ರಾಜಕೀಯ ತಿರುವು ಪಡೆದುಕೊಳ್ಳುವತ್ತ ಸಾಗುತ್ತಿದೆ. ಈ ಬಗ್ಗೆ ಇನ್‌ಸೈಡ್‌ ಪಾಲಿಟಿಕ್ಸ್ ಇಲ್ಲಿದೆ ನೋಡಿ..!