Asianet Suvarna News Asianet Suvarna News

News Hour: ಕಾಂಗ್ರೆಸ್,ವಿಪಕ್ಷಗಳ ನಡುವೆ YST & VST ಬೆಂಕಿ..!

ಕರ್ನಾಟಕ ವಿಧಾನಸಭೆಯ ಅಧಿವೇಶನದ ಮೊದಲ ದಿನವೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಡೈನಮೈಟ್‌ ಇಟ್ಟಿದ್ದಾರೆ. ಜಿಎಸ್‌ಟಿ ಬಳಿಕ ರಾಜ್ಯದಲ್ಲಿ ವೈಎಸ್‌ಟಿ ಜಾರಿಯಾಗಿದೆ ಎಂದು ಹೇಳಿದ್ದಕ್ಕೆ ಸಾಲು ಸಾಲು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

First Published Jul 3, 2023, 11:02 PM IST | Last Updated Jul 3, 2023, 11:02 PM IST

ಬೆಂಗಳೂರು (ಜು.3): ಹೊಸ ಸರ್ಕಾರ ಆರಂಭವಾಗಿ ಮೊದಲ ಅಧಿವೇಶನದ ಮೊದಲ ದಿನವೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಸರ್ಕಾರಕ್ಕೆ ಡೈನಮೈಟ್‌ ಇಟ್ಟಿದ್ದಾರೆ. ಶಾಸಕರ ಶಿಫಾರಸು ಪತ್ರವನ್ನು ತೆಗೆದುಕೊಂಡು ಬಂದರೂ, ಮುಖ್ಯಮಂತ್ರಿ ಅಕ್ಕಪಕ್ಕದಲ್ಲಿರುವ ವ್ಯಕ್ತಿಗಳು ಈ ಕೆಲಸ ಮಾಡಿಕೊಡೋದಕ್ಕೆ 30 ಲಕ್ಷ ಲಂಚ ಕೇಳುತ್ತಿದ್ದಾರೆ ಎಂದು ಘನ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಜಿಎಸ್‌ಟಿ ಬಳಿಕ ವೈಎಸ್‌ಟಿ ಜಾರಿಯಾಗಿದೆ ಎಂದ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಸಾಥ್‌ ನೀಡಿದ್ದಾರೆ. ವೈಎಸ್‌ಟಿ ಮಾತ್ರವಲ್ಲ ವಿಎಸ್‌ಟಿ ತೆರಿಗೆ ಕೂಡ ಚಾಲ್ತಿಯಲ್ಲಿದೆ ಎಂದಿದ್ದಾರೆ. 

ಬಿಜೆಪಿ ಒಡೆದ ಮನೆ, ವಿರೋಧ ಪಕ್ಷದಲ್ಲಿ ಕೂತ ಮೇಲಂತೂ ಮುನ್ನೂರು ಬಾಗಿಲಾಗಿದೆ : ಪ್ರಿಯಾಂಕ ಖರ್ಗೆ

‘ಬಿಜೆಪಿ ಅವಧಿಯಲ್ಲಿ ಸುಖಾಸುಮ್ಮನೆ ಆರೋಪ ಮಾಡಿದ್ರಿ. ಆಗ ಸಾಕ್ಷ್ಯ ಕೇಳಿದಾಗ ಕೊಡೋಕೆ ಆಗುತ್ತಾ ಅಂದಿದ್ದರು. ನಾವು ಆರೋಪಿಸಿದ್ರೆ ಈಗ್ಯಾಕೆ ದಾಖಲೆ ಕೊಡಬೇಕು ನಿಮ್ಗೆ. ಸಣ್ಣ ಸ್ಥಾನಕ್ಕೆ 30 ಲಕ್ಷ ಕೇಳಿರಬೇಕು, ಅಲ್ಲಿ ಎಲ್ಲಾ ಕೋಟಿಗಟ್ಟಲೇ. ಅದು ಯಾವುದೋ ಸಣ್ಣ ಕೆಲಸಕ್ಕೆ 30 ಲಕ್ಷ ರೂ. ಕೇಳಿದ್ದಾರೆ. ಸಿಎಂ ಕಚೇರಿಯಲ್ಲಿ ಕೋಟ್ಯಾಂತರ ರೂಪಾಯಿ ಕೇಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.