ಸಿದ್ದು ಸರ್ಕಾರದ ವಿರುದ್ಧ ಅಖಾಡಕ್ಕಿಳಿದ ಬಿಎಸ್‌ವೈ: ಬಿಬಿಎಂಪಿ ಕಮಿಷನ್ ಅಸ್ತ್ರ ಹಿಡಿದು ಹೋರಾಟಕ್ಕೆ ಪ್ಲ್ಯಾನ್ !
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ಲ್ಯಾನ್
ಆಗಸ್ಟ್ 23ಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ಬಿಎಸ್‌ವೈ ನಿವಾಸದಲ್ಲಿ ಹೋರಾಟದ ಬಗ್ಗೆ ಚರ್ಚೆ
ಸಿದ್ದರಾಮಯ್ಯರ ಕ್ಲೀಯರ್ ಮೆಜಾರಿಟಿ ಸರ್ಕಾರಕ್ಕೆ ಕಮಿಷನ್ ಕಂಟಕ ಸವಾಲಾಗಿದೆ. ಕೃಷಿ ಸಚಿವರ ವಿರುದ್ಧ ಕಮಿಷನ್ ದೂರು ಬಳಿಕ ಬಿಬಿಎಂಪಿ(BBMP) ಗುತ್ತಿಗೆದಾರರು ಕಮಿಷನ್ ಕಂಪ್ಲೆಂಟ್ ಹಿಡಿದು ನಿಂತರು. ಬಾಕಿ ಬಿಲ್ ಪಾವತಿಗೆ ಕಮಿಷನ್‌ಗೆ(Commission) ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಗುತ್ತಿಗೆದಾರರು ಗವರ್ನರ್‌ಗೆ ಕೊಟ್ಟ ದೂರು ಈಗ ಗುತ್ತಿಗೆದಾರರನ್ನೇ ವಿಚಾರಣೆಗೆ ಗುರಿಯಾಗಿಸಿದೆ. ಇದು ಕಾಂಗ್ರೆಸ್ ಸರ್ಕಾರದ ಧಮನಕಾರಿ ನೀತಿ ಎಂದು ಆರೋಪಿಸುತ್ತಿರುವ ಬಿಜೆಪಿ , ಇದೀಗ ಸಿದ್ದು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಬಿಎಸ್‌ವೈ ನಿವಾಸದಲ್ಲಿ ಶುಕ್ರವಾರ ಬೆಂಗಳೂರು ಶಾಸಕರ ಸಭೆ(MLAs Meeting) ನಡೆಸಿ ಹೋರಾಟದ ರೂಪು ರೇಷೆ ಸಿದ್ಧ ಪಡಿಸಿದ್ರು. ಇನ್ನೂ ಕಾಂಗ್ರೆಸ್ ಘರ್ ವಾಪ್ಸಿ ರಾಜಕೀಯದಲ್ಲಿ ಬೆಂಗಳೂರು ಭಾಗದವರೇ ಹೆಚ್ಚಿದ್ದಾರೆ. ಹೀಗಾಗಿ ಬಿಎಸ್‌ವೈ(BSY) ನಿವಾಸದಲ್ಲಿ ಕರೆದ ಬೆಂಗಳೂರು ಶಾಸಕರ ಸಭೆಯಲ್ಲಿ ಸಹಜವಾಗೇ ಕಾಂಗ್ರೆಸ್ (Congress) ಆಪರೇಷನ್ ಪಾಲಿಟಿಕ್ಸ್ ಸದ್ದು ಮಾಡಿದೆ. ಈ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಎಸ್‌ವೈ ಕೊಟ್ಟ ಅಚ್ಚರಿ ಹೇಳಿಕೆ ಆಪರೇಷನ್ ಪಾಲಿಟಿಕ್ಸ್‌ನಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಒಬ್ಬಿಬ್ಬರು ಪಕ್ಷ ಬಿಡೋ ಬಗ್ಗೆ ಯೋಚಿಸಿರಬಹುದು ಅವರ ಜೊತೆ ಮಾತಾಡ್ತೀನಿ ಎಂದರು.
ಇದನ್ನೂ ವೀಕ್ಷಿಸಿ: ಶಿವಣ್ಣನಿಗೆ ಹೆಚ್ಚಿದ ತಮಿಳು ಫ್ಯಾನ್ಸ್: ಘೋಸ್ಟ್ ಹಿಟ್, ಲಿಯೋ ಫಟ್ ಎಂದಿದ್ದು ಯಾಕೆ?