ಶಕ್ತಿ ಯೋಜನೆಗೆ ಚಾಲನೆ: ಸ್ತ್ರೀಯರು ಫುಲ್‌ ಖುಷ್‌... ಈ ಬಗ್ಗೆ ಮಹಿಳಾಮಣಿಗಳು ಹೇಳೋದೇನು ?

ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿಗೆ ಭಾನುವಾರ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಮಹಿಳೆಯರಿಗೆ ಟಿಕೆಟ್‌ನನ್ನು ಹರಿದು ಕೊಟ್ಟಿದ್ದಾರೆ. ಈ ಬಗ್ಗೆ ಮಹಿಳೆಯರು ಏನ್‌ ಹೇಳ್ತಾರೆ ನೋಡಿ..

First Published Jun 12, 2023, 9:14 AM IST | Last Updated Jun 12, 2023, 9:14 AM IST

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ತಾವೇ ಸ್ವತಃ ಬಸ್‌ನಲ್ಲಿ ಮಹಿಳೆಯರಿಗೆ ಟಿಕೆಟ್‌ನನ್ನು ಹರಿದು ಕೊಟ್ಟಿದ್ದಾರೆ. ಇನ್ನೂ ಈ ಯೋಜನೆ ಬಗ್ಗೆ ಮಾತನಾಡಿರುವ ಮಹಿಳೆಯರು, ಇದರಿಂದ ನಮಗೆ ತುಂಬಾ ಸಹಾಯವಾಗುತ್ತಿದೆ. ಅದರಲ್ಲೂ ಬಡ ಮಹಿಳೆಯರು, ಸ್ಕೂಲ್‌ ಮಕ್ಕಳು, ವೃದ್ಧರಿಗೆ ತುಂಬಾ ಸಹಕಾರಿಯಾಗಿದೆ ಎಂದು ಶಿವಮೊಗ್ಗದ ಮಹಿಳೆಯರು ಹೇಳಿದ್ದಾರೆ. ಸರ್ಕಾರ ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂಬುದು ಕೆಲ ಮಹಿಳೆಯರ ಅಭಿಪ್ರಾಯವಾಗಿದೆ. 

ಇದನ್ನೂ ವೀಕ್ಷಿಸಿ: ಕೊಟ್ಟ ಮಾತನ್ನು ಉಳಿಸಿಕೊಂಡ ಜೋಡೆತ್ತು ಸರ್ಕಾರ..!: ಸ್ತ್ರೀ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್..!

Video Top Stories