ದಿಢೀರ್ ಮೋದಿ ಭೇಟಿ: ಯತ್ನಾಳ್ ಬಣದ ವಿರುದ್ಧ ವರಿಷ್ಠರಿಗೆ ದೂರು ನೀಡ್ತಾರಾ ವಿಜಯೇಂದ್ರ?
ಅಮಿತ್ ಶಾ, ಜೆಪಿ ನಡ್ಡಾ ಭೇಟಿಗೂ ವಿಜಯೇಂದ್ರ ಸಮಯ ಕೇಳಿದ್ದಾರೆ. ಯತ್ನಾಳ್ ಬಣದ ವಿರುದ್ಧ ವರಿಷ್ಠರಿಗೆ ವಿಜಯೇಂದ್ರ ದೂರು ನೀಡ್ತಾರಾ? ಎಂಬ ಪ್ರಶ್ನೆಗಳು ಇದೀಗ ಉದ್ಭವಾಗಿವೆ. ಪಕ್ಷದ ಸಂಘಟನೆ ಹುದ್ದೆಗಳ ಬದಲಾವಣೆ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆಯಾಗುವ ಸಾಧ್ಯತೆ ಇದೆ.
ಬೆಂಗಳೂರು(ಡಿ.19): ಅಧಿವೇಶನ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಬಿ.ವೈ ವಿಜಯೇಂದ್ರ ನಿನ್ನೆ ಸಂಜೆ ದಿಢೀರ್ ದೆಹಲಿಗೆ ತೆರಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಣಗಳ ಫೈಟ್ ಮಧ್ಯೆ ವಿಜಯೇಂದ್ರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಬಿ.ವೈ ವಿಜಯೇಂದ್ರ ಭೇಟಿಯಾಗಿದ್ದಾರೆ. ಪಕ್ಷದ ವಿದ್ಯಾಮಾನಗಳ ಬಗ್ಗೆ ಪ್ರಧಾನಿ ಮೋದಿ ಜೊತೆ ವಿಜಯೇಂದ್ರ ಚರ್ಚೆ ನಡೆಸಿದ್ದಾರೆ. ಮೋದಿ ಆಶೀರ್ವಾದ ಉತ್ಸಾಹ ತುಂಬಿದೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದೆಷ್ಟು? ಬಿಡುಗಡೆಯಾಗಿದ್ದೆಷ್ಟು?
ಇನ್ನು ಅಮಿತ್ ಶಾ, ಜೆಪಿ ನಡ್ಡಾ ಭೇಟಿಗೂ ವಿಜಯೇಂದ್ರ ಸಮಯ ಕೇಳಿದ್ದಾರೆ. ಯತ್ನಾಳ್ ಬಣದ ವಿರುದ್ಧ ವರಿಷ್ಠರಿಗೆ ವಿಜಯೇಂದ್ರ ದೂರು ನೀಡ್ತಾರಾ? ಎಂಬ ಪ್ರಶ್ನೆಗಳು ಇದೀಗ ಉದ್ಭವಾಗಿವೆ. ಪಕ್ಷದ ಸಂಘಟನೆ ಹುದ್ದೆಗಳ ಬದಲಾವಣೆ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆಯಾಗುವ ಸಾಧ್ಯತೆ ಇದೆ. ವಿಜಯೇಂದ್ರ ಒಂದೆರಡು ದಿನ ದೆಹಲಿಯಲ್ಲೇ ಉಳಿದುಕೊಳ್ಳಲಿದ್ದಾರೆ.