ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದೆಷ್ಟು? ಬಿಡುಗಡೆಯಾಗಿದ್ದೆಷ್ಟು?

ಸಿದ್ದರಾಮಯ್ಯ ಸರ್ಕಾರದಲ್ಲಿ ಅನುದಾನ  ನೀಡಲು ದುಡ್ಡಿಲ್ವಾ? ಶಾಸಕರು ಅನುದಾನ ಸಿಗದೆ ಪರದಾಡುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಬಿಜೆಪಿ ಆರೋಪಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಸರ್ಕಾರದ ಬಳಿ ದುಡ್ಡಿದೆ ಎಂದಿದ್ದಾರೆ. ಹಾಗಾದರೆ ಬಜೆಟ್‌ನಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದಷ್ಟು? ಕೊಟ್ಟಿದ್ದೆಷ್ಟು?

First Published Dec 18, 2024, 11:37 PM IST | Last Updated Dec 18, 2024, 11:37 PM IST

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನ ಪ್ರಶ್ನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಅನುದಾನ ವಿಚಾರಕ್ಕೆ ಮಹತ್ವ ನೀಡಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.ಉಚಿತ ಗ್ಯಾರೆಂಟಿಗೆ ಹೊಂದಿಸಲು ಬಹುಪಾಲು ಹಣ ಖರ್ಚಾಗುತ್ತಿದೆ. ಹೀಗಾಗಿ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಅನ್ನೋ ಆರೋಪಗಳು ನಿಜವಾಗುತ್ತಿದೆ. ಶಾಸಕಾಂಗ ಪಕ್ಷದಲ್ಲಿ ಕಾಂಗ್ರೆಸ್ ಶಾಸಕರು ಅನುದಾನ ಕುರಿತು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ತೇಲಿಕೆಯ ಉತ್ತರ ನೀಡಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದರ ನಡುವೆ ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ಇಲಾಖೆಗಳಿಗ ಘೋಷಿಸಿದೆ ಅನುದಾನವೆಷ್ಟು? ಕೊಟ್ಟಿದ್ದೆಷ್ಟು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.