ಪಾಕ್ ಪರ ಘೋಷಣೆ ಪ್ರಕರಣ: ನಾಸಿರ್ ಹುಸೇನ್ ವಿಚಾರಣೆ ಇಲ್ವಾ?
ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಸಂಬಂಧ ಸಂಬಂಧ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಸಂಸದ ನಾಸೀರ್ ಹುಸೇನ್ ವಿಚಾರಣೆ ನಡೆಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು (ಮಾ.6): ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಸಂಸದ ನಾಸೀರ್ ಹುಸೇನ್ ಆಗಿದ್ದು, ಪೊಲೀಸರು ವಿಚಾರಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಭಾವಿ ರಾಜಕಾರಣಿಯಾಗಿರುವ ಕಾರಣಕ್ಕೆ ಪೊಲೀಸರು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಅಸಲಿಗೆ ಬಂಧಿತರಾಗಿರುವ ಮೂವರು ಕೂಡ ನಾಸೀರ್ ಅತ್ಯಾಪ್ತ ಬೆಂಬಲಿಗರಾಗಿದ್ದಾರೆ.