Asianet Suvarna News Asianet Suvarna News

ಛತ್ತೀಸ್‌ಗಢ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ ? ಬಿಜೆಪಿಯ ಮಾಸ್ಟರ್‌ಸ್ಟ್ರೋಕ್‌ಗೆ ಕಾಂಗ್ರೆಸ್ ತತ್ತರ !

ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್
ಮತ್ತೆ ಅಧಿಕಾರ ಹಿಡಿಯಲು ಯಶಸ್ವಿಯಾದ ಬಿಜೆಪಿ!
ಸಿಎಂ ಭಗೇಲ್ಗೆ ಆಘಾತ.. BJP ರಣತಂತ್ರ ಸಕ್ಸಸ್!

ಬುಡಕಟ್ಟು ಸಮುದಾಯ, ಒಬಿಸಿ ಸಮುದಾಯಗಳೇ ಪ್ರಾಬಲ್ಯ ಸಾಧಿಸಿರುವ ಛತ್ತೀಸಘಡದಲ್ಲಿ(Chhattisgarh) ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದೇ ಹೆಚ್ಚು. ಆದರೆ ಈ ಬಾರಿ ಬಿಜೆಪಿಯ ಮಾಸ್ಟರ್‌ಸ್ಟ್ರೋಕ್‌ಗೆ ಕಾಂಗ್ರೆಸ್(Congress) ತತ್ತರಿಸಿದೆ. 90 ವಿಧಾನಸಭಾ ಕ್ಷೇತ್ರ ಸ್ಥಾನಗಳಿರುವ ಛತ್ತೀಸಘಡದಲ್ಲಿ ಸರ್ಕಾರ ರಚನೆಗೆ ಕನಿಷ್ಠ 46 ಸ್ಥಾನ ಗೆಲ್ಲಬೇಕು. ಬಿಜೆಪಿ 54 ಸ್ಥಾನ ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆಯಿತು. ಇತ್ತ ಕಾಂಗ್ರೆಸ್ 35 ಸ್ಥಾನಕ್ಕೆ ಕುಸಿತ ಕಂಡಿತು. ಛತ್ತಿಸಘಡ ಸಿಎಂ ರೇಸ್‌ನಲ್ಲಿರುವ ಪ್ರಮುಖ ನಾಯಕರುಗಳೆಂದರೇ, 2024ರ ಲೋಕಸಭಾ ಚುನಾವಣೆ(Loksabha election) ದೃಷ್ಟಿಯಿಂದ ಬುಡಕಟ್ಟು ಸಮುದಾಯದ ಪ್ರಬಲ ನಾಯಕ ವಿಷ್ಣು ದಿಯೋ ಸಾಯಿ(Vishnu Deo Sai) ಹೆಸರು ಮುಂಚೂಣಿಯಲ್ಲಿದೆ. ಛತ್ತಿಸಘಡದ ಮಾಜಿ ಸಿಎಂ ಹಾಗೂ ಕೇಂದ್ರದ ಮಾಜಿ ಸಚಿವ ವಿಷ್ಣು ದಿಯೋ ಸಾಯಿ ಮುಂದಿನ ಸಿಎಂ ಅನ್ನೋ ಮಾತುಗಳು ಬಲವಾಗುತ್ತಿದೆ.ಛತ್ತೀಸಘಡ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹೆಸರು ಕೂಡ ಸಿಎಂ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಮಹಿಳಾ ಸಿಎಂ ನೇಮಕಗೊಂಡರೆ ರೇಣುಕಾ ಸಿಂಗ್ ಹೆಸರು ಮುಂಚೂಣಿಯಲ್ಲಿದೆ.ಕಾಂಗ್ರೆಸ್ ಮಾಡಿದ ಒಬಿಸಿ ಆರೋಪಕ್ಕೆ ಪ್ರತ್ಯುತ್ತರ ನೀಡಲು ಒಬಿಸಿ ಸಮುದಾಯದಿಂದ ಸಿಎಂ ಆಯ್ಕೆ ಮಾಡಿದರೆ ನಾಯಕ ಅರುಣ್ ಸಾವೋ ಹೆಸರು ಮುಂಚೂಣಿಯಲ್ಲಿದೆ.

ಇದನ್ನೂ ವೀಕ್ಷಿಸಿ:  ಚುನಾವಣೆ ಗೆದ್ದಾಯ್ತು..ಈಗ ಶುರುವಾಯ್ತು ಅಸಲಿ ಸವಾಲು ! ಸಿಎಂ ಆಯ್ಕೆಯೇ ಬಿಜೆಪಿಗೆ ಬಿಗ್‌ ಚಾಲೆಂಜ್‌ !