Asianet Suvarna News Asianet Suvarna News

ಚುನಾವಣೆ ಗೆದ್ದಾಯ್ತು..ಈಗ ಶುರುವಾಯ್ತು ಅಸಲಿ ಸವಾಲು ! ಸಿಎಂ ಆಯ್ಕೆಯೇ ಬಿಜೆಪಿಗೆ ಬಿಗ್‌ ಚಾಲೆಂಜ್‌ !

ಮಧ್ಯಪ್ರದೇಶದಲ್ಲಿ ಬಿಜೆಪಿ 5ನೇ ಬಾರಿ ಗೆದ್ದಿದೆ. ಇಲ್ಲಿ ಮತಗಟ್ಟೆ ಸಮೀಕ್ಷೆಗಿಂತಲೂ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆದ್ದಿದೆ.
 

ಇನ್ನೂ ಭಾರಿ ಕುತೂಹಲ ಮೂಡಿಸಿದ್ದ ಪಂಚ ರಾಜ್ಯ ಚುನಾವಣೆ( 5 State Assembly Election) ಸುಸೂಕ್ತವಾಗಿ ಮುಗಿದು 4 ರಾಜ್ಯಗಳ ಫಲಿತಾಂಶವು ಬಂದಿದೆ. 4ರಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ(BJP) ತನ್ನ ಪಾರುಪತ್ಯ ಸಾಧಿಸಿದೆ. ಆದ್ರೆ, ಈಗ ಗೆದ್ದ ರಾಜ್ಯಗಳಲ್ಲಿ ಸಿಎಂ ಆಯ್ಕೆ ಸಂಕಷ್ಟ ಎದುರಾಗಿದೆ. ಮೂರು ರಾಜ್ಯದಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಗ್ಗಟ್ಟಾಗಿ ಚುನಾವಣೆ ಎದುರುಸಿ ಗೆದ್ದ ಕೇಸರಿ ಪಡೆಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಮೂರು ರಾಜ್ಯಗಳಲ್ಲಿ ಸಿಎಂ ಆಯ್ಕೆ ಮಾಡುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಹೀಗಾಗಿ ಮಧ್ಯಪ್ರದೇಶ(Madhya Pradesh), ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಯಾರಾಗ್ತಾರೆ ಸಿಎಂ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. 

ಇದನ್ನೂ ವೀಕ್ಷಿಸಿ:  ತೆಲಂಗಾಣದಲ್ಲಿ ಸಿಎಂ ರೇಸ್‌ನಲ್ಲಿ ರೇವಂತ್‌ ರೆಡ್ಡಿ V/S ಉತ್ತಮ್‌ ರೆಡ್ಡಿ ? ಯಾರಿಗೆ ಪಟ್ಟ ?

Video Top Stories