Asianet Suvarna News Asianet Suvarna News

ಯಾರು ಸಿದ್ದು ಎದುರಾಳಿ..? ವಿಧಾನಸಭೆಗೆ ಯಾರು ಕಮಲ ಕ್ಯಾಪ್ಟನ್..?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 25 ದಿನಗಳಾದರು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎದುರಿಸುವ ವಿಪಕ್ಷ ನಾಯಕ ಯಾರು ಎನನ್ಉವುದು ನಿರ್ಧಾರವಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ ಗತ್ತು, ತಾಕತ್ತು.. ಮಾತಿಗೆ ನಿಂತ್ರೆ ಸಿಎಂ ಸಿದ್ದು ಎಂಥವರನ್ನಾದರು ಮಾತಿನಲ್ಲಿ ಕಟ್ಟಿ ಹಾಕಬಲ್ಲ ಮಾತಿನ ಮಲ್ಲ. ಮಾತಿನಲ್ಲೇ ಪಾಯಿಂಟ್ ಹಾಕೋ ವಕೀಲ ರಾಮಯ್ಯನವರ ವಾಕ್ಚಾತುರ್ಯಕ್ಕೆ ಅವ್ರೇ ಸಾಟಿ. ಇಂಥಾ ಸಿದ್ದರಾಮಯ್ಯನವರನ್ನು ವಿಧಾನಸಭೆಯಲ್ಲಿ ಎದುರಿಸಿ ನಿಲ್ಲುವ ಕಮಲಾಧಿಪತಿ ಯಾರು..?ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 25 ದಿನಗಳಾಯ್ತು. ಈ 25 ದಿನಗಳಲ್ಲಿ ಮುಖ್ಯಮಂತ್ರಿ ಕಗ್ಗಂಟನ್ನು ಬಿಡಿಸಿ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ ಆಗಿದ್ದೂ ಆಯ್ತು, ಇಬ್ಬರೂ ರಾಜ್ಯದರ್ಬಾರ್ ಶುರು ಮಾಡಿದ್ದೂ ಆಗಿದೆ. ಇವೆಲ್ಲದರ ಮಧ್ಯೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯೂ ಆಗಿ ಮಂತ್ರಿಗಳೆಲ್ಲಾ ತಮ್ಮ ತಮ್ಮ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದ್ರೆ ಪ್ರಮುಖ ವಿರೋಧ ಪಕ್ಷ ಬಿಜೆಪಿ ಪಾಳೆಯದ ಕಥೆಯೇ ಬೇರೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎದುರಿಸುವ ವಿಪಕ್ಷ ನಾಯಕ ಯಾರು..? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 

Video Top Stories