Asianet Suvarna News Asianet Suvarna News

ಜೆಡಿಎಸ್‌- ಬಿಜೆಪಿ ಮೈತ್ರಿ: ಎಚ್‌ಡಿ ದೇವೇಗೌಡರ ನಿಲುವು ಏನು?

ಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನ ದೇವೇಗೌಡರು ಪಡೆದಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಮೈತ್ರಿ ಅನಿವಾರ್ಯ ಅಂತ ಹಲವು ಶಾಸಕರು ತಮ್ಮ ಅಭಿಪ್ರಾಯವನ್ನ ಪಡೆದಿದ್ದಾರೆ. ಶಾಸಕರ ಸಭೆಯಲ್ಲಿ ಮೈತ್ರಿ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಸಲಾಗಿದೆ. 

ಬೆಂಗಳೂರು(ಜು.21): ಜೆಡಿಎಸ್‌- ಬಿಜೆಪಿ ಮೈತ್ರಿಗೆ ಸಂಭಂಧಿಸಿದಂತೆ ನಿನ್ನೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು  ಸಭೆಯನ್ನ ಕರೆದಿದ್ದರು. ನಿನ್ನೆಯ ಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನ ದೇವೇಗೌಡರು ಪಡೆದಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಮೈತ್ರಿ ಅನಿವಾರ್ಯ ಅಂತ ಹಲವು ಶಾಸಕರು ತಮ್ಮ ಅಭಿಪ್ರಾಯವನ್ನ ಪಡೆದಿದ್ದಾರೆ. ಶಾಸಕರ ಸಭೆಯಲ್ಲಿ ಮೈತ್ರಿ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಜೆಡಿಎಸ್‌ ಪಕ್ಷ ಉಳಿಸಲು ಮೈತ್ರಿ ಬೇಕೆಂದು ಶಾಸಕರು ಹೇಳಿದ್ದಾರೆ. ಮುಂದೆ ಮತ್ತೆ ಕೇಂದ್ರದಲ್ಲಿ ಮೋದಿಯೇ ಅಧಿಕಾರಕ್ಕೆ ಬರುತ್ತಾರೆ, ಆದರೆ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರೋದು ಡೌಟ್‌, ಬಿಜೆಪಿಯವರಿಗೂ ನಮ್ಮ ಬೆಂಬಲ ಬೇಕಾಗಬಹುದು ಅಂತ ಜೆಡಿಎಸ್‌ ಶಾಸಕರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. 

ಕರ್ನಾಟಕ ರಾಜಕೀಯದಲ್ಲಿ ಅಪರೂಪದ ವಿದ್ಯಮಾನ: ಹೊಸ ಅಧ್ಯಾಯಕ್ಕೆ ಪೀಠಿಕೆ?

Video Top Stories