Asianet Suvarna News Asianet Suvarna News

ಕರ್ನಾಟಕ ರಾಜಕೀಯದಲ್ಲಿ ಅಪರೂಪದ ವಿದ್ಯಮಾನ: ಹೊಸ ಅಧ್ಯಾಯಕ್ಕೆ ಪೀಠಿಕೆ?

ಇಂದು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಜಂಠಿ ಸುದ್ದಿಗೋಷ್ಠಿಯನ್ನ ಮಾಡಿದ್ದಾರೆ. ಅಧಿಕೃತ ಮೈತ್ರಿಗೂ ಮುನ್ನವೇ ಇಬ್ಬರು ವಿಪಕ್ಷ ನಾಯಕರು ಒಂದಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಸಿಎಂಗಳು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು(ಜು.21): ರಾಜ್ಯ ಕಾರಣದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಆಗುತ್ತೆ ಅಂತ ನಾವು ಸುದ್ದಿ ಪ್ರಸಾರ ಮಾಡಿದಾಗ ಯಾರೋಬ್ಬರು ಅಲ್ಲಗಳೆಯಲಿಲ್ಲ. ಮೈತ್ರಿ ಆಗುತ್ತೆ ಅನ್ನೋದಕ್ಕೆ ಪೂರಕವಾಗಿ ಎಲ್ಲರೂ ವರ್ತನೆ ಮಾಡುತ್ತಿದ್ದಾರೆ. ಇಂದು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಜಂಠಿ ಸುದ್ದಿಗೋಷ್ಠಿಯನ್ನ ಮಾಡಿದ್ದಾರೆ. ಅಧಿಕೃತ ಮೈತ್ರಿಗೂ ಮುನ್ನವೇ ಇಬ್ಬರು ವಿಪಕ್ಷ ನಾಯಕರು ಒಂದಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಸಿಎಂಗಳು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕರ ಅನಾನತಿಗೆ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಮನನ್ನು ನೋಡಲು ಸಿದ್ದರಾಮಯ್ಯನವರು ಬಸ್‌ ಕೊಟ್ಟಿದ್ದಾರೆ: ಎಚ್‌.ವಿಶ್ವನಾಥ್‌