Asianet Suvarna News Asianet Suvarna News

Sumalatha V/S Chaluvaraya Swamy: ಯಾರು “ನಾಟಿ”.. ಯಾರು “ಹೈಬ್ರೀಡ್”..? ಏನಿದು ಹೊಸ ಕಥೆ..?

ನಾಟಿ Vs ಹೈಬ್ರೀಡ್ ಯುದ್ಧಕ್ಕೆ ಕಿಚ್ಚು ಹೊತ್ತಿಸಿದ  ಮಂಡ್ಯದ ಪೈಲ್ವಾನ್..!
ನಾಗಮಂಗಲದ ಆ "ನಾಟಿ" ತಳಿಯೇ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ..!
ನಾಟಿ Vs ಹೈಬ್ರೀಡ್ ಮಧ್ಯೆ ನಡೆಯಲಿದ್ಯಂತೆ ಸ್ವಾಭಿಮಾನದ ಯುದ್ಧ..!

First Published Feb 22, 2024, 6:27 PM IST | Last Updated Feb 22, 2024, 6:27 PM IST

ಮಂಡ್ಯ ಅಂದ್ರೆ ಸ್ವಾಭಿಮಾನದ ಕೋಟೆ.. ರಾಜಕಾರಣ ಅಂತ ಬಂದ್ರೆ ಮಂಡ್ಯದಲ್ಲಿ ನಡೆಯೋದು ರಣರಣ ಬೇಟೆ. ಜಿದ್ದು-ಗುದ್ದಿನ, ಜಿದ್ದಾಜಿದ್ದಿನ ರಾಜಕೀಯಕ್ಕೆ ಮಂಡ್ಯ ಹೆಸರುವಾಸಿ. ಮಂಡ್ಯದಲ್ಲಿ(Mandya) ರಾಜಕಾರಣದ ಕಿಚ್ಚು ಹೊತ್ತಿಕೊಳ್ತು ಅಂದ್ರೆ ಅದನ್ನು ಇಡೀ ಇಂಡಿಯಾವೇ ತಿರುಗಿ ನೋಡತ್ತೆ. ಅಂಥಾ ಮಂಡ್ಯದ ನೆಲದಲ್ಲಿ ಶುರುವಾಗಿದೆ ನಾಟಿ Vs ಹೈಬ್ರಿಡ್ ಕದನ. ಲೋಕಸಭಾ ಚುನಾವಣೆಯಲ್ಲಿ(Loksabha election) ಈ ಬಾರಿಯೂ ಮಂಡ್ಯ ಕ್ಷೇತ್ರವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗೋ ಎಲ್ಲಾ ಸೂಚನೆಗಳು ಸಿಗ್ತಾ ಇವೆ. ಕಳೆದ ಬಾರಿ ಮಂಡ್ಯದಲ್ಲಿ ನಡೆದ ಮಹಾಯುದ್ಧ ಹೇಗಿತ್ತು ಅನ್ನೋದನ್ನು ಇಡೀ ದೇಶವೇ ನೋಡಿದೆ. ಅವತ್ತು ಸ್ವಾಭಿಮಾನದ ಯುದ್ಧ, ಈ ಬಾರಿ ನಾಟಿ vs ಹೈಬ್ರಿಡ್ ಕಾಳಗ. ಮಂಡ್ಯ ರಣಕಣಕ್ಕೆ ಹೀಗೊಂದು ಟ್ವಿಸ್ಟ್ ಕೊಟ್ಟು, ಯುದ್ಧಕ್ಕೂ ಮೊದಲೇ ಕದನ ಕಾವೇರುವಂತೆ ಮಾಡಿದ್ದಾರೆ ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ, ನಾಗಮಂಗಲ ಶಾಸಕ ಚಲುವರಾಯಸ್ವಾಮಿ(Chaluvarayaswamy). ಈ ಬಾರಿ ಮತ್ತೊಂದು ರಣರೋಚಕ ಫೈಟ್'ಗೆ ಸಾಕ್ಷಿಯಾಗಲಿದೆ ಮಂಡ್ಯ ಲೋಕಸಭಾ ಕ್ಷೇತ್ರ. ಹಾಗ್ ನೋಡಿದ್ರೆ ಪ್ರತೀ ಚುನಾವಣೆಯಲ್ಲೂ ಇಂಡಿಯಾದ ಗಮನ ಸೆಳೆಯೋದು ಮಂಡ್ಯದ ಜಾಯಮಾನ. ಅಂಥಾ ರಣರಣ ಚರಿತ್ರೆಯಲ್ಲಿ ರಣರೋಚಕ ಅಧ್ಯಾಯವೊಂದನ್ನು ಬರೆದವರು ರೆಬೆಲ್ ಲೇಡಿ ಸುಮಲತಾ ಅಂಬರೀಶ್(Sumalata Ambarish). 2019ರಲ್ಲಿ ಸ್ವಾಭಿಮಾನದ ಕಹಳೆಯೂದಿ ದಳಪತಿಗಳನ್ನು ಮಟ್ಟ ಹಾಕಿದ್ದ ಸುಮಲತಾ, ಮತ್ತೊಮ್ಮೆ ಮಂಡ್ಯದಿಂದಲೇ ಸ್ಪರ್ಧೆಗೆ ರೆಡಿಯಾಗ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Congress: ಯಾರಿಗೆ ಸಿಗುತ್ತೆ ಅರಮನೆ ನಗರಿಯ ಕಾಂಗ್ರೆಸ್ ಟಿಕೆಟ್..? ಯತೀಂದ್ರ ಸ್ಪರ್ಧೆಗೆ ಸಿದ್ದರಾಮಯ್ಯ ಬೆಂಬಲಿಗರ ಒತ್ತಡ !

Video Top Stories