Congress: ಯಾರಿಗೆ ಸಿಗುತ್ತೆ ಅರಮನೆ ನಗರಿಯ ಕಾಂಗ್ರೆಸ್ ಟಿಕೆಟ್..? ಯತೀಂದ್ರ ಸ್ಪರ್ಧೆಗೆ ಸಿದ್ದರಾಮಯ್ಯ ಬೆಂಬಲಿಗರ ಒತ್ತಡ !
ಯತೀಂದ್ರ ಸ್ಪರ್ಧೆ ವಿಚಾರದಲ್ಲಿ ಒಂದು ಕಾಲು ಹಿಂದಿಟ್ಟ ಸಿದ್ದರಾಮಯ್ಯ
‘ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಿಂದ ಯತೀಂದ್ರ ಸ್ಪರ್ಧೆ ಬೇಡ’
‘ಬಿಜೆಪಿ, ಜೆಡಿಎಸ್ ಮೈತ್ರಿ ಆಗದಿದ್ದರೆ ಯತೀಂದ್ರಗೆ ಗೆಲುವಿನ ಚಾನ್ಸ್ ಜಾಸ್ತಿ’
ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಹಂಚಿಕೆಯೇ ಭಾರೀ ತಲೆನೋವಾಗಿದೆ. ಬೆಂಗಳೂರಿನ(Bengaluru) ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್(Congress) ನಾಯಕರು ಸಭೆ ನಡೆಸಿದ್ರು. ಒಂದೆಡೆ ಹಳೇ ಮೈಸೂರು(Mysore) ಭಾಗದ ಒಕ್ಕಲಿಗರಿಗೆ ಸಿಎಂ, ಡಿಸಿಎಂ ಟಾಸ್ಕ್ ನೀಡಿದ್ರೆ, ಇನ್ನೊಂದೆಡೆ ಖರ್ಗೆಯೇ ಮತ್ತೆ ಕಲಬರಗಿಯಿಂದ ಸ್ಪರ್ಧಿಸಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಖರ್ಗೆ ನಿರಾಕರಿಸಿದ್ದು, ಅವರ ಬದಲು ಅವರ ಕುಟುಂಬಸ್ಥರನ್ನೇ ಕಣಕ್ಕಿಳಿಸಿ ಎಂದು ಶಾಸಕರು ಒತ್ತಾಯಿಸಿದ್ದಾರೆ. ಯತೀಂದ್ರ(Yathindra) ಸ್ಪರ್ಧೆಗೆ ಸಿದ್ದರಾಮಯ್ಯ ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ. ಆದ್ರೆ ಬೆಂಬಲಿಗರ ಮಾತನ್ನು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಬಿಜೆಪಿ(BJP)-ಜೆಡಿಎಸ್(Jds) ಮೈತ್ರಿ ಯತೀಂದ್ರ ಪಾಲಿಗೆ ಮುಳ್ಳಾಗುವ ಸಾಧ್ಯತೆ ಇದೆ. ಈಗ ಚುನಾವಣೆಗೆ ಸ್ಪರ್ಧಿಸುವ ರಿಸ್ಕ್ ಬೇಡ. ಪರಿಸ್ಥಿತಿ ನಾವು ಅಂದು ಕೊಂಡ ರೀತಿಯಲ್ಲಿ ಇಲ್ಲ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: Samajwadi Party: 5 ಪ್ರಮುಖ ರಾಜ್ಯಗಳಲ್ಲಿ ಮೈತ್ರಿ ಫೇಲ್.. ಉತ್ತರ ಪ್ರದೇಶದಲ್ಲಿ I.N.D.I.A. ಸಕ್ಸಸ್ !