Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!

ಅಬ್ದುಲ್ ಸುಬಾನ್ ಎಂಬುವರು ದುಬೈನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದು, ಕೋಲಾರಕ್ಕೆ ಬಂದು ಮತ ಚಲಾಯಿಸಿದ್ದಾರೆ. ಹಾಗೆಯೇ ಜೀವಿತ ಎಂಬುವರು ಮಂಗಳೂರಿಗೆ ಬಂದು ಮತಚಲಾಚಣೆ ಮಾಡಿದ್ದಾರೆ. 

First Published Apr 26, 2024, 4:09 PM IST | Last Updated Apr 26, 2024, 4:10 PM IST

ಲೋಕಸಭಾ ಚುನಾವಣೆ (Lok Sabha Elections 2024) ಹಿನ್ನೆಲೆ ಒಂದು ಕಡೆ ಮತದಾರರು ಮತ ಹಾಕಲು ಹಿಂದೇಟು ಹಾಕಿದರೆ ಇನ್ನೂ ಕೆಲವು ಕಡೆ ದೇಶ ವಿದೇಶದಲ್ಲಿ ಇರುವ ಇಲ್ಲಿನ ನಿವಾಸಿಗಳು ತಮ್ಮ ಊರಿಗೆ ಬಂದು ಮತ ಹಾಕಿ ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಈ ಮೂಲಕ ಮತದಾನದ ಮೌಲ್ಯ ಎಷ್ಟು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಕೋಲಾರ ಹಾಗೂ ಮಂಗಳೂರಿನ (Kolar and Mangalore) ನಿವಾಸಿಗಳು ದುಬೈನಿಂದ ಬಂದು ಮತಚಲಾವಣೆ ಮಾಡಿದ್ದಾರೆ. ಅಬ್ದುಲ್ ಸುಬಾನ್ ಎಂಬುವರು ದುಬೈನಲ್ಲಿ(Dubai) ಬ್ಯುಸಿನೆಸ್ ಮಾಡುತ್ತಿದ್ದು, ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿ ತಮ್ಮ ಜವಬ್ದಾರಿಯನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಜೀವಿತ ಎಂಬುವರು ದುಬೈನಿಂದ ಮಂಗಳೂರಿಗೆ ಬಂದು ಮತ ಚಲಾವಣೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ; ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!