Asianet Suvarna News Asianet Suvarna News

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ (Lok Sabha Elections 2024) ಹಿನ್ನೆಲೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ(voting) ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ವಿಶೇಷ ಘಟನೆಯೊಂದು ನಡೆದಿದೆ. ಚಾಮರಾಜನಗರ (Chamarajanagar) ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ವರ ಚೇತನ್ ಅವರು ಮತಗಟ್ಟೆ ಸಂಖ್ಯೆ 60 ರಲ್ಲಿ ಮತದಾನ ಮಾಡಿದ್ದಾರೆ. ಇವರಿಗೆ ಇಂದು ದೀಪಿಕಾ ಜೊತೆ ವಿವಾಹ ಕಾರ್ಯ ನಡೆಯುತ್ತಿದೆ. 9 ಗಂಟೆಗೆ ದಾರ ಮುಹೂರ್ತ ಇದ್ದು, ನನ್ನ ಹಕ್ಕನ್ನ ನಾನು ಚಲಾಯಿಸಲು ಬಂದಿದ್ದೇನೆ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ, ಯಾರು ಕೂಡ ಮತದಾನದಿಂದ ವಂಚಿತರಾಗಬಾರದು. ಈ ಕಾರಣಕ್ಕೆ ನಾನು ತಾಳಿ ಕಟ್ಟುವ ಮುನ್ನ ಬಂದು ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದು ಮತದ ಮೌಲ್ಯದ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ಅಭ್ಯರ್ಥಿ ಯದುವೀರ್‌ರಿಂದ ಮತದಾನ: ಸೀರೆ ಮೂಲಕ ಮತದಾನ ಜಾಗೃತಿ ಮೂಡಿಸಿದ ಡಿಸಿ ಶಿಲ್ಪಾ ನಾಗ್‌

Video Top Stories