ಸಂತನ ಸ್ಫೋಟಕ ಮಾತು..ಕಾಂಗ್ರೆಸ್ ಕೋಟೆಯೊಳಗೆ ಬಿರುಗಾಳಿ! ಏನಿದು ಒಕ್ಕಲಿಗ ಸ್ವಾಮೀಜಿ ಹೇಳಿದ ಧರ್ಮ ಮಾರ್ಗ ರಹಸ್ಯ..?

"ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲಿ" ಎಂದ ಒಕ್ಕಲಿಗ ಸ್ವಾಮೀಜಿ..!
"ಅವರು 'ಕಾವಿ' ತ್ಯಜಿಸ್ತಾರಾ.. ನಾನು ಸನ್ಯಾಸಿಯಾಗಲು ಸಿದ್ಧ" ಅಂದಿದ್ಯಾರು..?
"ಸ್ವಾಮೀಜಿ ಹೇಳಿದ ಮಾತು ನಿಜವಾಗುವ ಕಾಲ ಬರತ್ತೆ" ಅಂದ ಒಕ್ಕಲಿಗ ಮಂತ್ರಿ..!
 

Share this Video
  • FB
  • Linkdin
  • Whatsapp

ಇಷ್ಟು ದಿನ ಕಾಂಗ್ರೆಸ್ (Congress)ಶಾಸಕರು, ಮಂತ್ರಿಗಳ ಮಧ್ಯೆ ನಡೀತಾ ಇದ್ದ ಕುರ್ಚಿ ಕಾಳಗದ ಜಟಾಪಟಿ. ಖಾಲಿಯಿಲ್ಲದ ಕುರ್ಚಿಗಾಗಿ ಕಾಂಗ್ರೆಸ್ ಕೋಟೆಯೊಳಗೆ ಭರ್ಜರಿ ಯುದ್ಧ. ಖಾದಿ ವೀರರ ಆ ರಣರಂಗಕ್ಕೆ ಈಗ ಕಾವಿ ಎಂಟ್ರಿಯಾಗಿದೆ. ರಾಜ್ಯದ ಪ್ರಭಾವಿ ಒಕ್ಕಲಿಗ ಸ್ವಾಮೀಜಿಯೊಬ್ಬರು (Vokkaligara Swamiji) ಡಿಕೆ ಶಿವಕುಮಾರ್ (DK Shivakumar) ಪರ ಧ್ವನಿ ಎತ್ತಿದ್ದಾರೆ. ಸಿದ್ದರಾಮಯ್ಯನವ್ರು ಸಿಎಂ ಪಟ್ಟವನ್ನು ಡಿಕೆಶಿಯವ್ರಿಗೆ ಬಿಟ್ಟು ಕೊಡ್ಬೇಕು ಎಂದಿದ್ದಾರೆ. ಇಷ್ಟು ದಿನ ಸಿಎಂ ಪಟ್ಟಕ್ಕಾಗಿ ಖಾದಿ ಕಲಿಗಳ ಮಧ್ಯೆ ನಡೀತಾ ಇದ್ದ ಕಾಳಗಕ್ಕೆ ಕಾವಿ ಎಂಟ್ರಿ ಕೊಟ್ಟಿರೋ ಪರಿಯನ್ನು. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ(Chandrashekar Swamiji) ಆಡಿರೋ ಮಾತುಗಳಿವು. ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ (Siddaramaiah) ಮುಂದೆಯೇ ಒಕ್ಕಲಿಗ ಸ್ವಾಮೀಜಿ ಮುಖ್ಯಮಂತ್ರಿ ಪಟ್ಟದ ಬಗ್ಗೆ ಮಾತಾಡಿದ್ದಾರೆ. ಸಿದ್ದರಾಮಯ್ಯನವರನ್ನು ವೇದಿಕೆಯಲ್ಲಿ ಕೂರಿಸಿಕೊಂಡೇ, ಡಿಕೆಶಿ ಸಿಎಂ ಆಗ್ಲಿ ಅಂದಿದ್ದಾರೆ. ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವ್ರಿಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಡಲಿ ಅಂತ ಬಹಿರಂಗ ವೇದಿಕೆಯಲ್ಲೇ ಆಗ್ರಹ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಗಗನಯಾತ್ರಿಗಳ ಜೀವ ಉಳಿಸುತ್ತಾ ಎಲಾನ್ ಮಸ್ಕ್ ಪ್ಲಾನ್..? ಒಂದು ಯುದ್ಧದಿಂದಲೇ ಉದ್ಭವಿಸಿದ ಪ್ರಾಣಾಂತಕ ಪರಿಸ್ಥಿತಿ?

Related Video