Asianet Suvarna News Asianet Suvarna News
breaking news image

ಸುಮ್ಕಿರಿ ಎಂದ ಡಿಸಿಎಂ..ಡೋಂಟ್ ವರಿ ಎಂದ ಸಿಎಂ..! ಸಿಎಂ ಕುರ್ಚಿ ಕಾಳಗಕ್ಕೆ ಕಾವಿಗಳ ನೇರ ಎಂಟ್ರಿ..!

ಕಾಂಗ್ರೆಸ್‌ನಲ್ಲಿ ಕಿಡಿ ಹೊತ್ತಿಸಿದ ಸಿಎಂ ಕುರ್ಚಿ ಕುರುಕ್ಷೇತ್ರ..!
ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಜೊತೆಗೆ ಡಿಸಿಎಂ ಪಟ್ಟ
ಹೈಕಮಾಂಡ್‌ಗೆ ಶುರುವಾಯ್ತು ಸಿಎಂ,ಡಿಸಿಎಂ ಟೆನ್ಷನ್..! 

ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಬಂದಾಗಿನಿಂದಲೂ ಸಿಎಂ ಪಟ್ಟಕ್ಕಾಗಿ ಯುದ್ಧವೇ ನಡೆಯುತ್ತಿದೆ. ಇದೀಗ ಸ್ವಾಮೀಜಿಗಳು ಜಾತಿ ಅಸ್ತ್ರ ಹಿಡಿದು ಯುದ್ಧಕ್ಕೆ ಎಂಟ್ರಿಯಾಗಿದ್ದಾರೆ. ಈ ಜಾತಿ ವ್ಯೂಹವೇ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್‌ಗೆ(DK shivakumar) ಕಂಟಕವಾಗುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್‌ ಪರ ಒಕ್ಕಲಿಗ ಸ್ವಾಮೀಜಿ(Vokkaliga Swamiji) ಬ್ಯಾಟ್‌ ಬೀಸಿದ್ದು, ಲಿಂಗಾಯತ ಸ್ವಾಮೀಜಿ ಲಿಂಗಾಯತರಿಗೆ ಸಿಎಂ ಪಟ್ಟ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಜೊತೆಗೆ ಡಿಸಿಎಂ ಪಟ್ಟವನ್ನು ಸಹ ಕೊಡಲಾಗಿದೆ. ಇನ್ನೂ ಸಿದ್ದರಾಮಯ್ಯ ಪರ ಹರಿಹರದ ವಚನಾನಂದ ಶ್ರೀ ನಿಂತಿದ್ದಾರೆ.

ಇದನ್ನೂ ವೀಕ್ಷಿಸಿ:  ಸಿದ್ದು-ಡಿಕೆಶಿ ಬಣಗಳ ನಡುವೆ ಅಧ್ಯಕ್ಷ ಹುದ್ದೆಗಾಗಿ ಫೈಟ್‌: ಕೆಪಿಸಿಸಿ ಹುದ್ದೆ ಮೇಲೆ ರಾಜಣ್ಣ, ಎಂ.ಬಿ.ಪಾಟೀಲ್‌ ಕಣ್ಣು

Video Top Stories