Asianet Suvarna News Asianet Suvarna News

ಸಿದ್ದು-ಡಿಕೆಶಿ ಬಣಗಳ ನಡುವೆ ಅಧ್ಯಕ್ಷ ಹುದ್ದೆಗಾಗಿ ಫೈಟ್‌: ಕೆಪಿಸಿಸಿ ಹುದ್ದೆ ಮೇಲೆ ರಾಜಣ್ಣ, ಎಂ.ಬಿ.ಪಾಟೀಲ್‌ ಕಣ್ಣು

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಬಣಗಳ ಮಧ್ಯೆ  ಅಧ್ಯಕ್ಷ ಹುದ್ದೆಗಾಗಿ ಫೈಟ್ ನಡೆಯುತ್ತಿದೆ. ಕೆಪಿಸಿಸಿ ಗಾದಿ ಮೇಲೆ ಕಾಂಗ್ರೆಸ್‌ನ ಹಲವು ನಾಯಕರ ಕಣ್ಣು ಹಾಕಿದ್ದಾರೆ.

ಲೋಕಸಭೆ ಫಲಿತಾಂಶ ಬೆನ್ನಲ್ಲೇ ಅಧ್ಯಕ್ಷರ ಬದಲಾವಣೆ ಕೂಗು ಕಾಂಗ್ರೆಸ್‌ನಲ್ಲಿ(Congress) ಜೋರಾಗಿ ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಹುದ್ದೆಗಾಗಿ ಸಚಿವರ ಮಧ್ಯೆ ಸಮರ ಜೋರಾಗಿದೆ. ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್‌ (DK Shivakumar) ಬಣಗಳ ಮಧ್ಯೆ  ಅಧ್ಯಕ್ಷ ಹುದ್ದೆಗಾಗಿ ಫೈಟ್ ನಡೆಯುತ್ತಿದೆ. ಕೆಪಿಸಿಸಿ ಗಾದಿ ಮೇಲೆ ಕಾಂಗ್ರೆಸ್‌ನ ಹಲವು ನಾಯಕರ ಕಣ್ಣು ಹಾಕಿದ್ದು, ಒಬ್ಬರಿಗೆ ಒಂದೇ ಹುದ್ದೆ ನೀಡಿ ಎಂದು ಒತ್ತಾಯ ಕೇಳಿಬರುತ್ತಿದೆ. ಡಿಕೆಶಿ ಡಿಸಿಎಂ ಆಗಿದ್ದಾರೆ, ಕೆಪಿಸಿಸಿ ಹುದ್ದೆ ಬಿಟ್ಟುಕೊಡಲಿ ಎಂದು ಆಗ್ರಹಿಸುತ್ತಿದ್ದಾರೆ. ಕೆಪಿಸಿಸಿ ಹುದ್ದೆ(KPCC post) ಮೇಲೆ ಸಚಿವರಾದ ರಾಜಣ್ಣ, ಎಂ.ಪಿ.ಪಾಟೀಲ್ ಕಣ್ಣಾಕಿದ್ದಾರೆ. ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ರಾಜಣ್ಣ ಹೇಳಿದ್ದಾರೆ. ಈ ಬಾರಿ ಲಿಂಗಾಯತರಿಗೆ ಅವಕಾಶ ನೀಡಿ ಎಂದು ಎಂಬಿಪಿ ಒತ್ತಾಯ ಮಾಡಿದ್ದಾರೆ. ಕೆಪಿಸಿಸಿ ಬದಲಾವಣೆ ಬೆನ್ನಲ್ಲೇ ಪದಾಧಿಕಾರಿಗಳ ಜತೆ ಡಿಕೆಶಿ ಚರ್ಚೆ ನಡೆಸಿದ್ದು, ಪದಾಧಿಕಾರಿಗಳ ಸಭೆ ಮೂಲಕ ಡಿಕೆಶಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಣಕ್ಕೆ ಡಿಕೆ ಶಿವಕುಮಾರ್ ಈ ಮೂಲಕ ತಿರುಗೇಟು ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಕೌಟುಂಬಿಕ ಕಲಹ ಹಿನ್ನೆಲೆ: ಎಸ್‌ಪಿ ಕಚೇರಿಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಕಾನ್‌ಸ್ಟೇಬಲ್‌

Video Top Stories