Asianet Suvarna News Asianet Suvarna News

ಕಾಂಗ್ರೆಸ್‌ಗೆ ಮತ್ತಷ್ಟು ಹತ್ತಿರವಾದ್ರಾ ರೆಬೆಲ್ಸ್ ? ಬನವಾಸಿಯಲ್ಲಿ 'ಕೈ'ಗೆ ಸೇರ್ಪಡೆಯಾದ ವಿವೇಕ್ ಹೆಬ್ಬಾರ್

ಬನವಾಸಿ ಕಾಂಗ್ರೆಸ್ ಪ್ರಚಾರದ ವೇಳೆ ಪಕ್ಷ ಸೇರಿದ ವಿವೇಕ್ ಹೆಬ್ಬಾರ್
ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾರಿಂದ ಪಕ್ಷಕ್ಕೆ ಸ್ವಾಗತ
ನೂರಾರು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್

ಲೋಕಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿ(BJP) ಶಾಸಕರ ಮಗ ಕಾಂಗ್ರೆಸ್‌ಗೆ(Congress) ಸೇರ್ಪಡೆಯಾಗಿದ್ದಾರೆ. ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್( Shivaram Hebbar) ಪುತ್ರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಈಗಾಗಲೇ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ ರಾಜ್ಯಸಭಾ ಚುನಾವಣೆಗೆ ಶಿವರಾಮ್ ಹೆಬ್ಬಾರ್ ಗೈರಾಗಿದ್ದರು. ಅನಾರೋಗ್ಯದ ಕಾರಣ ನೀಡಿ ಚುನಾವಣೆಗೆ ಗೈರಾಗಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೂ ಬರದೇ ತಟಸ್ಥವಾಗಿದ್ದಾರೆ. ಬನವಾಸಿ ಕಾಂಗ್ರೆಸ್ ಪ್ರಚಾರದ ವೇಳೆ ವಿವೇಕ್ ಹೆಬ್ಬಾರ್(Vivek Hebbar) ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾರಿಂದ ಪಕ್ಷಕ್ಕೆ ಸ್ವಾಗತ ಕೋರಲಾಯಿತು. ನೂರಾರು ಬೆಂಬಲಿಗರ ಜೊತೆ ವಿವೇಕ್ ಹೆಬ್ಬಾರ್‌ ಕಾಂಗ್ರೆಸ್ ಸೇರಿದರು. ಶಾಸಕ ಶಿವರಾಮ್ ಹೆಬ್ಬಾರ್ ನಡೆಗೆ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ಹೆಬ್ಬಾರ್ ಬಿಜೆಪಿಗೆ ದ್ರೋಹ ಮಾಡಿದ್ದಾರೆ. ಹೆಬ್ಬಾರ್ ಮಗ ಕಾಂಗ್ರೆಸ್ ಸೇರಿರೋದು ಆಶ್ಚರ್ಯ ಸಂಗತಿ ಏನಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪರ ಎಸ್.ಟಿ ಸೋಮಶೇಖರ್‌ ಪ್ರಚಾರ ನಡೆಸಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ STS ಮತ ಹಾಕಿದ್ದರು.

ಇದನ್ನೂ ವೀಕ್ಷಿಸಿ: CT Ravi on Bhojegowda : ನನ್ನ ಹಣೆಬರಹ ಕೆಟ್ಟಿತ್ತು, ಜೆಡಿಎಸ್ ಕೂಡ ನನ್ನ ವಿರೋಧವಾಗಿ ಕೆಲಸ ಮಾಡ್ತು: ಸಿ.ಟಿ. ರವಿ

Video Top Stories