Asianet Suvarna News Asianet Suvarna News

CT Ravi on Bhojegowda : ನನ್ನ ಹಣೆಬರಹ ಕೆಟ್ಟಿತ್ತು, ಜೆಡಿಎಸ್ ಕೂಡ ನನ್ನ ವಿರೋಧವಾಗಿ ಕೆಲಸ ಮಾಡ್ತು: ಸಿ.ಟಿ. ರವಿ

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸೋಲನ್ನ ನೆನೆದ ಸಿ.ಟಿ.ರವಿ
ಚುನಾವಣೆ ವೇಳೆ ಕೆಲಸ ಚರ್ಚೆಯಾಗಲಿಲ್ಲ,ಅಪಪ್ರಚಾರ ಚರ್ಚೆಯಾಯಿತು
ಮೈತ್ರಿ ಗೆಳೆಯ ಜೆಡಿಎಸ್ ಬೋಜೇಗೌಡರಿಗೆ ಮಾತಿನಲ್ಲಿ ತಿವಿದ ಸಿ.ಟಿ.ರವಿ 

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ತಮ್ಮ ಸೋಲನ್ನ ಸಿ.ಟಿ.ರವಿ(CT Ravi) ನೆನೆದಿದ್ದಾರೆ. ಮೈತ್ರಿ ಗೆಳೆಯ ಜೆಡಿಎಸ್ ಭೋಜೇಗೌಡರನ್ನು(MLC Bhojegowda) ಮಾತಿನಲ್ಲಿ ತಿವಿದಿದ್ದಾರೆ. ಪ್ರಚಾರದ ವೇಳೆ ವೇದಿಕೆ ಮೇಲಿದ್ದ ಜೆಡಿಎಸ್(JDS) ಎಂಎಲ್‌ಸಿ ಕಾಲೆಳೆದಿದ್ದಾರೆ. 4 ಬಾರಿ ಶಾಸಕನಾಗಿದ್ದಾಗ ಹೆಚ್ಚು ಕೆಲಸ ಮಾಡಿದ್ದು 2018-2023. ಆದರೆ ಈ ಬಾರಿ ಹೆಚ್ಚು ಕೆಲಸ ಮಾಡಿದ್ರೂ ಸೋತೆ. ಚುನಾವಣೆ ವೇಳೆ ಕೆಲಸ ಚರ್ಚೆಯಾಗಲಿಲ್ಲ, ಅಪಪ್ರಚಾರ ಚರ್ಚೆಯಾಯಿತು ಎಂದು ಸಿ.ಟಿ.ರವಿ ಹೇಳಿದ್ದಾರೆ. ನನ್ನ ಹಣೆಬರಹ ಕೆಟ್ಟಿತ್ತು, ಜೆಡಿಎಸ್ ಕೂಡ ನನ್ನ ವಿರೋಧವಾಗಿ ಕೆಲಸ ಮಾಡ್ತು. ಜೆಡಿಎಸ್ ಅಭ್ಯರ್ಥಿ ಇದ್ರು ನನ್ನ ವಿರುದ್ಧ ಕೆಲಸ ಮಾಡಿದ್ರು. ನಮ್ಮ ನಾಯಕರ ಹೆಸರನ್ನೂ ಬಳಸಿ ಅಪಪ್ರಚಾರ ಮಾಡಿದ್ರು ಎಂದು ಸಿ.ಟಿ.ರವಿ ಹೇಳಿದ್ದಾರೆ. ಇದೆ ವೇಳೆ ಸಿಟ್ಟಾಗಿದ್ದ ಸಿ.ಟಿ‌.ರವಿ ಪರ ಬಿಎಸ್‌ವೈ(BSY) ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಸಿ.ಟಿ.ರವಿ ಭವಿಷ್ಯದ ಬಗ್ಗೆ ಮಾಜಿ ಸಿಎಂ ಮಾತನಾಡಿದ್ದಾರೆ. ಇವತ್ತು ನಮ್ಮ ಸಿ.ಟಿ.ರವಿಗೆ ಅನ್ಯಾಯವಾಗಿದೆ. ಯಾರು ವಿಧಾನಸಭೆಯಲ್ಲಿ ಗುಡುಗಬೇಕಿತ್ತೋ ಅವರು ಹೊರಗಿದ್ದಾರೆ.  ರವಿಗೆ ವಿಧಾನಸಭೆ ಅಥವಾ ವಿಧಾನ ಪರಿಷತ್‌ನಲ್ಲಿ ಅವಕಾಶ ಸಿಗಲೇಬೇಕು ಎಂದು ಬಿಎಸ್‌ವೈ ಹೇಳದ್ದಾರೆ.

ಇದನ್ನೂ ವೀಕ್ಷಿಸಿ:  Okkaliga Fight: ಹೊತ್ತಿ ಉರಿಯುತ್ತಿದೆ ಒಕ್ಕಲಿಗ ಕಿಚ್ಚು : ಡಿಕೆಶಿ ‘ಮೈತ್ರಿ ಪತನ’ ಏಟಿಗೆ ಎಚ್‌ಡಿಕೆ ‘ಕೊತ್ವಾಲ್’ ತಿರುಗೇಟು !

Video Top Stories