ಸರ್ಕಾರದಲ್ಲಿ ಶಾಸಕ V/S ಸಚಿವರ ಸಂಘರ್ಷ: ಪರೋಕ್ಷವಾಗಿ ರಾಜೀನಾಮೆ ಮಾತಾಡಿದ್ರಾ ಕುಲಕರ್ಣಿ?

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಜತೆ ಸಂಘರ್ಷ
ಟೆಂಡರ್ ವಿಚಾರದಲ್ಲಿ ಉಭಯ  ನಾಯಕರ ಫೈಟ್
ಬ್ಲಾಕ್ ಲಿಸ್ಟ್‌ಗೆ ಹಾಕ್ತೀನಿ ಎಂದಿದ್ದ ಭೈರತಿ ಸುರೇಶ್

First Published Jul 2, 2024, 12:38 PM IST | Last Updated Jul 2, 2024, 12:38 PM IST

ರಾಜ್ಯ ಸರ್ಕಾರದಲ್ಲಿ(State government) ಶಾಸಕ ಮತ್ತು ಸಚಿವರ ನಡುವೆ ಸಂಘರ್ಷ(conflict) ಶುರುವಾಗಿದ್ದು, ಶಾಸಕ ಕುಲಕರ್ಣಿ(Vinay Kulkarni) V/S ಸಚಿವ ಭೈರತಿ ಸುರೇಶ್ (Minister Byrathi Suresh) ನಡುವೆ ವಾರ್ ನಡೆಯುತ್ತಿರುವಂತೆ ಕಾಣುತ್ತಿದೆ. ವಿನಯ್‌ ಕುಲಕರ್ಣಿ ನೀರು ಸರಬರಾಜು, ಒಳಚರಂಡಿ ನಿಗಮ ಅಧ್ಯಕ್ಷರಾಗಿದ್ದಾರೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಜತೆ ಭಿನ್ನಮತ ಉಂಟಾಗಿದೆ. ಟೆಂಡರ್ ವಿಚಾರದಲ್ಲಿ ಉಭಯ ನಾಯಕರ ನಡುವೆ ಫೈಟ್ ನಡೆಯುತ್ತಿದೆ ಎನ್ನಲಾಗ್ತಿದೆ. ಬ್ಲಾಕ್ ಲಿಸ್ಟ್‌ಗೆ ಹಾಕ್ತೀನಿ ಎಂದು ಭೈರತಿ ಸುರೇಶ್ ಹೇಳಿದ್ದರು. ದುರಾಡಳಿತ ಸಹಿಸೋದಿಲ್ಲ ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ. ಸಚಿವ ಭೈರತಿ ವಿರುದ್ಧ ಹೈಕಮಾಂಡ್‌ಗೆ ಕುಲಕರ್ಣಿ ದೂರು ನೀಡಿದ್ದು, ಗೌರವ ಇಲ್ಲದ ಕಡೆ ಯಾಕೆ ಇರಬೇಕು ಎಂದು ಕುಲಕರ್ಣಿ ಪ್ರಶ್ನಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಾನ್‌ಸ್ಟೇಬಲ್‌ ಶಿವರಾಜ್‌ ಆತ್ಮಹತ್ಯೆ ಕೇಸ್‌: ಮೃತದೇಹ ಪತ್ತೆಗೆ ಪೊಲೀಸರಿಂದ 250 ಸಿಸಿಟಿವಿ ತಲಾಶ್‌!

Video Top Stories