ಒಂದೇ ತಿಂಗಳ ಗ್ಯಾಪಲ್ಲಿ ಅದೆಷ್ಟು ವಿವಾದಗಳು!? ಅಂದು ಸಾರಿ ಕೇಳಿದ್ರು.. ಈಗ ರಾಜೀನಾಮೆ.. ನಾಳೆ?

ವಿದೇಶದಲ್ಲೆಲ್ಲೋ ಕೂತು, ಭಾರತದ ಬಗ್ಗೆ ಸ್ಯಾಮ್ ಪಿತ್ರೋಡಾ ಆಡ್ತಾ ಇರೋ ಮಾತುಗಳು, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದರಿಂದ ಕಾಂಗ್ರೆಸ್ಗೆ ನಯಾಪೈಸೆ ಲಾಭವಂತೂ ಇಲ್ಲ.. ಆದ್ರೆ, ನಷ್ಟ ಮಾತ್ರ ಕಟ್ಟಿಟ್ಟ ಬುತ್ತಿ..

Share this Video
  • FB
  • Linkdin
  • Whatsapp

ವಿದೇಶದಲ್ಲೆಲ್ಲೋ ಕೂತು, ಭಾರತದ ಬಗ್ಗೆ ಸ್ಯಾಮ್ ಪಿತ್ರೋಡಾ ಆಡ್ತಾ ಇರೋ ಮಾತುಗಳು, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದರಿಂದ ಕಾಂಗ್ರೆಸ್ಗೆ ನಯಾಪೈಸೆ ಲಾಭವಂತೂ ಇಲ್ಲ.. ಆದ್ರೆ, ನಷ್ಟ ಮಾತ್ರ ಕಟ್ಟಿಟ್ಟ ಬುತ್ತಿ.. ಇನ್ನು ಬಿಜೆಪಿಗಂತೂ ಸ್ಯಾಮ್ ಪಿತ್ರೋಡಾ ಹೇಳಿಕೆಗಳೇ ಬ್ರಹ್ಮಾಸ್ತ್ರಗಳು. ಒಂದೇ ತಿಂಗಳ ಗ್ಯಾಪಲ್ಲಿ ಹತ್ತಾರು ವಿವಾದ.. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿತ್ರೋಡಾ ಅವರು ಮಾಡಿದ ಎಡವಟ್ಟುಗಳು ಒಂದಾ.. ಎರಡಾ.. ತಾವೇ ಸೃಷ್ಟಿಸಿದ ವಿವಾದಗಳಿಂದ ಕಡೆಗೆ ಪಕ್ಷ ಕೊಟ್ಟಿದ್ದ ಸ್ಥಾನಕ್ಕೇ ರಾಜೀನಾಮೆ ಕೊಟ್ಟು ಕೈಕಟ್ಟಿ ಕೂರೋ ಪ್ರಮೇಯ ಎದುರಾಗಿದೆ.. ಗಾಂಧಿ ಪರಿವಾರದ ಆಪ್ತನೇ ಆಪತ್ತಿಗೆ ಮೂಲವಾದರಲ್ಲಾ ಅಂತ ಕಾಂಗ್ರೆಸಿಗರೇ ಮಾತಾಡಿಕೊಳ್ತಿದ್ದಾರೆ. ಅವತ್ತು ಸಾರಿ ಕೇಳಿದ್ರು.. ಇವತ್ತು ರಾಜೀನಾಮೆ ಕೊಟ್ಟಿದಾರೆ.. ಆದ್ರೆ, ಇಷ್ಟಕ್ಕೇ ಇದು ನಿಲ್ಲಲ್ಲ, ಅವರನ್ನ ಕಾಂಗ್ರೆಸ್ ಪಕ್ಷದಿಂದ ವಜಾ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ, ಎದುರಾಳಿ ನಾಯಕರು.. ಸ್ಯಾಮ್ ಪಿತ್ರೋಡಾ ಅನ್ನೋ ರಾಜಕೀಯ ಮುತ್ಸದ್ದಿ ಮಾಡಿದ ಎಡವಟ್ಟುಗಳ ಕತೆಯೇ ಇವತ್ತಿನ ಸುವರ್ಣ ಫೋಕಸ್, ಹಿಟ್ ವಿಕೆಟ್..

Related Video