Somanna meets Yediyurappa: ತುಮಕೂರು ‘ಲೋಕ’ ಟಿಕೆಟ್ ಮೇಲೆ ಸೋಮಣ್ಣ ಕಣ್ಣು: ಮುನಿಸು ಮರೆತು ಬಿಎಸ್‌ವೈ ಭೇಟಿ !

ಮಾಜಿ ಸಚಿವ ವಿ.ಸೋಮಣ್ಣ ಅವರು ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುನಿಸು ಮರೆತು ಭೇಟಿಯಾಗಿದ್ದಾರೆ.
 

Share this Video
  • FB
  • Linkdin
  • Whatsapp

ತುಮಕೂರು ಲೋಕಸಭಾ(Loksabha) ಟಿಕೆಟ್ ಮೇಲೆ ವಿ.ಸೋಮಣ್ಣ ಕಣ್ಣಿಟ್ಟಿದ್ದು, ಮಾಜಿ ಸಚಿವ ವಿ.ಸೋಮಣ್ಣ(V Somanna) ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ಇಬ್ಬರು ನಾಯಕರು ಭೇಟಿ ಮಾಡಿರುವುದು ಕುತೂಹಲ ಮೂಡಿದೆ. ತುಮಕೂರು(Tumakuru) ಲೋಕಸಭಾ(Loksabha) ಟಿಕೆಟ್‌ಗೆ ನಾಯಕರು ಜಟಾಪಟಿ ನಡೆಸುತ್ತಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿ ವಿ.ಸೋಮಣ್ಣ ಬಿಎಸ್‌ವೈ ಅವರನ್ನು ಭೇಟಿಯಾಗಿದ್ದಾರೆ. ದೆಹಲಿ ಲಾಬಿ ಆಯ್ತು ಈಗ ರಾಜ್ಯದ ಮಟ್ಟದ ಲಾಬಿ ಶುರುವಾಗಿದೆ. ಈ ಹಿಂದೆ ಸೋಮಣ್ಣಗೆ ಟಿಕೆಟ್ (Ticket) ನೀಡಬೇಕಾ ಬೇಡವಾ ಎನ್ನುವ ಚರ್ಚೆ. ಚರ್ಚೆಯಲ್ಲಿ ಮಾಧುಸ್ವಾಮಿ ಪರ ನಿಂತಿದ್ದ ಯಡಿಯೂರಪ್ಪ(B. S. Yediyurappa). ಮಾಧುಸ್ವಾಮಿಯನ್ನು ಮನೆಗೆ ಯಡಿಯೂರಪ್ಪ ಕರೆಸಿಕೊಂಡಿದ್ದರು. ತುಮಕೂರಿಗೆ ಟಿಕೆಟ್ ನೀನು‌ ಕೇಳು ಎಂಬ ಸಲಹೆ ನೀಡಿದ್ರಂತೆ ಬಿಎಸ್‌ವೈ. ಈ ಹಿನ್ನೆಲೆಯಲ್ಲಿ ಸೋಮಣ್ಣ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.

ಇದನ್ನೂ ವೀಕ್ಷಿಸಿ: ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದ್ದೇನು..? ಲಿಂಗಾಯತರಿಗೆ‌ ಟಿಕೆಟ್ ನೀಡಲು ಬಿಎಸ್‌ವೈ ಸಲಹೆ..ಹಲವರ ಹೆಸರು ಶಿಫಾರಸು

Related Video