ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದ್ದೇನು..? ಲಿಂಗಾಯತರಿಗೆ‌ ಟಿಕೆಟ್ ನೀಡಲು ಬಿಎಸ್‌ವೈ ಸಲಹೆ..ಹಲವರ ಹೆಸರು ಶಿಫಾರಸು

ಸಭೆಯಲ್ಲಿ ಪ್ರಮುಖವಾಗಿ  ಇಬ್ಬರು ನಾಯಕರ ಬಗ್ಗೆ ಚರ್ಚೆ
ಬೆಂಗಳೂರು ಉತ್ತರಕ್ಕೆ ಸಿಟಿ ರವಿ ಹೆಸರು ಕೂಡ ಶಿಫಾರಸು
ಉಡುಪಿ ಚಿಕ್ಕಮಗಳೂರಿಗೂ ಸಿಟಿ ರವಿ ಹೆಸರು ಶಿಫಾರಸು

Share this Video
  • FB
  • Linkdin
  • Whatsapp

ಲೋಕಸಮರಕ್ಕೆ ಬಿಜೆಪಿ(BJP) ಭರ್ಜರಿ ತಾಲೀಮು ನಡೆಸುತ್ತಿದ್ದು, ರಾಜ್ಯ ಬಿಜೆಪಿಯಿಂದ ಕೋರ್ ಕಮಿಟಿ ಸಭೆ(Core committee meeting) ಮಾಡಲಾಗಿದೆ. ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಚರ್ಚೆ ನಡೆದಿದೆ. ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್(Ticket) ನೀಡುವ ಬಗ್ಗೆ ಚರ್ಚೆಯಾಗಿದೆ. ಹಾಲಿ ಸಂಸದರ ಹೆಸರು ಒಳಗೊಂಡ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಸಭೆಯಲ್ಲಿ ಲಿಂಗಾಯತರಿಗೆ‌ ಟಿಕೆಟ್ ನೀಡಲು ಬಿಎಸ್‌ವೈ(BSY) ಸಲಹೆ ನೀಡಿದ್ದಾರೆ.ಸಭೆಯಲ್ಲಿ ಪ್ರಮುಖವಾಗಿ ಇಬ್ಬರು ನಾಯಕರ ಬಗ್ಗೆ ಚರ್ಚೆ ನಡೆದಿದೆ. ತುಮಕೂರಿಗೆ ಸೋಮಣ್ಣ, ಮಾಧುಸ್ವಾಮಿ ಹೆಸರು ಚರ್ಚೆಯಲ್ಲಿ ಇದೆ. ಉತ್ತರ ಕನ್ನಡ ಅನಂತ್ ಕುಮಾರ್ ಹೆಸರು ಸಹ ಶಿಫಾರಸು ಮಾಡಲಾಗಿದೆ. ಎಲ್ಲಾ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಟ್ಟ ಕೋರ್ ಕಮಿಟಿ. ಬೆಳಗಾವಿಯಲ್ಲಿ ಮತ್ತೆ ಜೆ.ಪಿ ನಡ್ಡಾ ಜೊತೆ ಮೀಟಿಂಗ್ ಇದ್ದು, ಜೆ.ಪಿ ನಡ್ಡಾ ಜೊತೆ ಸಭೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

ಇದನ್ನೂ ವೀಕ್ಷಿಸಿ: Rameshwaram Cafe Blast: ರಾಮೇಶ್ವರಂ ಕೆಫೆಯ ರಾಷ್ಟ್ರಭಕ್ತಿಯೇ ಬಾಂಬ್ ಬ್ಲಾಸ್ಟ್‌ಗೆ ಕಾರಣವಾ..?

Related Video