ಮಂಡ್ಯವನ್ನೇ ಯೋಗಿ ಆಯ್ಕೆ ಮಾಡಿಕೊಂಡದ್ದೇಕೆ ?: ಸನ್ಯಾಸಿ ಸಿಎಂ ಹೆಜ್ಜೆಯ ಹಿಂದಿನ ಕಾಲಭೈರವ ರಹಸ್ಯ!

ಒಕ್ಕಲಿಗರ ಉಕ್ಕಿನ ಕೋಟೆಯಲ್ಲಿ ಕಾಲಭೈರವನ ಪರಮಭಕ್ತ!
ಮಂಡ್ಯ ಚಕ್ರವ್ಯೂಹ ಭೇದಿಸಲು ಯೋಗಿ ಆದಿತ್ಯನಾಥ್ ಅಸ್ತ್ರ..!
ಕುರುಕ್ಷೇತ್ರದಲ್ಲಿ ಸನ್ಯಾಸಿ ಸಿಎಂ.. ಏರುತ್ತಾ ಬಿಜೆಪಿ ಗ್ರಾಫ್..?

Share this Video
  • FB
  • Linkdin
  • Whatsapp

ಮಂಡ್ಯ: ರಾಜಕೀಯ ರಣಭೂಮಿಗೆ, ರಣಕಲಿಗಳ ಯುದ್ಧಭೂಮಿಗೆ ಸನ್ಯಾಸಿ ಯೋಗಿಯ ಎಂಟ್ರಿಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕ ಕುರುಕ್ಷೇತ್ರಕ್ಕೆ ಧಾಮ್ ಧೂಮ್ ಎಂಟ್ರಿ ಕೊಟ್ಟಿದ್ದಾರೆ. ರಣಕ್ಷೇತ್ರಕ್ಕೆ ಸನ್ಯಾಸಿ ಯೋಗಿಯ ಎಂಟ್ರಿಯಾಗಿರೋದು ರಣರಣ ಮಂಡ್ಯ ಮೂಲಕ. ಉತ್ತರ ಪ್ರದೇಶದ ಸನ್ಯಾಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕ ಕುರುಕ್ಷೇತ್ರಕ್ಕೆ ಮಂಡ್ಯ ರಣಭೂಮಿಯಿಂದಲೇ ಎಂಟ್ರಿ ಕೊಟ್ಟಿದ್ದಾರೆ. ರಣರಣ ಮಂಡ್ಯ ನಂತ್ರ ಗಡಿಜಿಲ್ಲೆ ವಿಜಯಪುರ ರಣರಂಗಕ್ಕೆ ಸನ್ಯಾಸಿ ಯೋಗಿ ಎಂಟ್ರಿ ಕೊಟ್ಟಿದ್ದಾರೆ. ಸನ್ಯಾಸಿ ಯೋಗಿಯ ಶಕ್ತಿ, ಪ್ರಧಾನಿ ಮೋದಿ ಬಲವೇ ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿ ಬತ್ತಳಿಕೆಯ ಬ್ರಹ್ಮಾಸ್ತ್ರವಾಗಿದೆ. ಆ ಬ್ರಹ್ಮಾಸ್ತ್ರಗಳು ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲಿವೆಯಾ ಅನ್ನೋದೇ ಪ್ರಶ್ನೆಯಾಗಿದೆ. 

ಇದನ್ನೂ ವೀಕ್ಷಿಸಿ: 'ಕೈ' ನಾಯಕರ ಸುಳ್ಳು ಬಿಚ್ಚಿಡುವ 'ಅಸತೋಮ ಸದ್ಗಮಯ' ಪುಸ್ತಕ ಬಿಡುಗಡೆ


Related Video