'ಕೈ' ನಾಯಕರ ಸುಳ್ಳು ಬಿಚ್ಚಿಡುವ 'ಅಸತೋಮ ಸದ್ಗಮಯ' ಪುಸ್ತಕ ಬಿಡುಗಡೆ

ಬೆಂಗಳೂರಿನಲ್ಲಿ ಸಂಸದ ರಾಜೀವ್‌ ಚಂದ್ರಶೇಖರ್‌ 'ಅಸತೋಮ ಸದ್ಗಮಯ' ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ ಸುಳ್ಳು ಭರವಸೆಗಳ ಬಗ್ಗೆ ಬರೆಯಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಸಂಸದ ರಾಜೀವ್‌ ಚಂದ್ರಶೇಖರ್‌ 'ಅಸತೋಮ ಸದ್ಗಮಯ' ಪುಸ್ತಕ ಬಿಡುಗಡೆ ಮಾಡಿದರು. ಕಾಂಗ್ರೆಸ್ ನಾಯಕರ ಸುಳ್ಳು ಪ್ರಚಾರವನ್ನು ಎಳೆ ಎಳೆಯಾಗಿ ಈ ಪುಸ್ತಕದಲ್ಲಿ ಬರೆಯಲಾಗಿದೆ. ರಾಹುಲ್‌ ಗಾಂಧಿ ನಂದಿನಿ ಬ್ರಾಂಡ್‌ ಬಗ್ಗೆ ಸುಳ್ಳು ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮುಸ್ಲಿಂ ಮೀಸಲಾತಿ ಬಗೆಗಿನ ಸುಪ್ರೀಂಕೋರ್ಟ್‌ ತೀರ್ಪನ್ನ ಸುರ್ಜೇವಾಲಾ ತಪ್ಪಾಗಿ ಟ್ವೀಟ್‌ ಮಾಡಿದ್ದಾರೆ ಎಂದು ಕಿಡಿಕಾರಿದರು. ಈ ಪುಸ್ತಕದ ಮೂಲಕ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ಸುಳ್ಳುಗಳನ್ನು ಬಯಲು ಮಾಡಿದ್ದೇವೆ ಎಂದು ರಾಜೀವ್‌ ಚಂದ್ರಶೇಖರ್‌ ಗುಡುಗಿದ್ದಾರೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ನೀಡಿದ ಮತ್ತು ಈಡೇರಿಸದ ಭರವಸೆಯನ್ನು ಮತದಾರರ ಮುಂದೆ ಇಡುತ್ತೇವೆ. ಮತದಾರರನ್ನು ಕಾಂಗ್ರೆಸ್‌ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. 

ಇದನ್ನೂ ವೀಕ್ಷಿಸಿ: ವರುಣದಲ್ಲಿ 'ಟಗರು' ಕಟ್ಟಿಹಾಕಲು ಬಿಜೆಪಿ ಪ್ಲ್ಯಾನ್‌: ಸೋಮಣ್ಣ ಪರ ಸ್ಟಾರ್‌ ಪ್ರಚಾರಕರ ಕ್ಯಾಂಪೇನ್‌

Related Video