ಉಡುಪಿ-ಚಿಕ್ಕಮಗಳೂರಿನಲ್ಲಿ ಯಾರಿಗೆ ಒಲಿಯುತ್ತೆ ಗೆಲುವಿನ ಹಾರ? ಸಜ್ಜನ ರಾಜಕಾರಣಿಗಳ ಹೋರಾಟಕ್ಕೆ ಸಾಕ್ಷಿ ಈ ಕ್ಷೇತ್ರ!

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ, ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

Share this Video
  • FB
  • Linkdin
  • Whatsapp

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎರಡು ಪಕ್ಷದಿಂದ ಸಜ್ಜನ, ಸರಳ ರಾಜಕಾರಣಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಮರುಜೀವ ಕೊಟ್ಟ ಕ್ಷೇತ್ರವಾಗಿದೆ. ಸ್ವತಃ ಅಭ್ಯರ್ಥಿಗಳೇ ಮತದಾರನ ಬಳಿ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಭಾರೀ ತುರುಸಿನಿಂದ ಉಡುಪಿ-ಚಿಕ್ಕಮಗಳೂರು(Udupi-Chikkamagaluru) ಕಣ ಕೂಡಿದೆ. ಸಜ್ಜನ ರಾಜಕಾರಣಿಗಳ ನಡುವಿನ ಹೋರಾಟಕ್ಕೆ ಈ ಕ್ಷೇತ್ರ ಸಾಕ್ಷಿಯಾಗಿದೆ. ಕದನ ಕಣಕ್ಕೆ ಕರಾವಳಿ, ಮಲೆನಾಡು ಕ್ಷೇತ್ರ ರೆಡಿಯಾಗಿದೆ. ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ ಕೋಟ ಶ್ರೀನಿವಾಸ್ ಪೂಜಾರಿ(kota srinivas poojary), ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ(Jayaprakash Hegde) ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಹಾಗಾಗಿ ಯಾರಿಗೆ ಒಲಿಯುತ್ತೆ ಗೆಲುವಿನ ಹಾರ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಯಾರ ಪರ ಮತದಾರನ ಒಲವು? ಅದೃಷ್ಟ ಪರೀಕ್ಷೆಗಿಳಿದ ವಿ. ಸೋಮಣ್ಣ !

Related Video