Asianet Suvarna News Asianet Suvarna News

ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಯಾರ ಪರ ಮತದಾರನ ಒಲವು? ಅದೃಷ್ಟ ಪರೀಕ್ಷೆಗಿಳಿದ ವಿ. ಸೋಮಣ್ಣ !

ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ವಿಧಾನಸಭೆ ಸೋಲಿನ ಬಳಿಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. 
 

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ನಾಲ್ಕು ಕ್ಷೇತ್ರಗಳು ಹೈ ವೋಲ್ಟೇಜ್‌ ಕಣವಾಗಿದೆ. ಹಾಗಾಗಿ ಜಿದ್ದಾ ಜಿದ್ದಿನ ಕ್ಷೇತ್ರದಲ್ಲಿ ಮತದಾರನ ಒಲವು ಯಾರ ಪರ ಎಂಬುದು ಫಲಿತಾಂಶದ ದಿನ ತಿಳಿಯಲಿದೆ. ಇನ್ನೂ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ(V Somanna) ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯಿಂದ(BJP) ವಿ. ಸೋಮಣ್ಣ ಕಣಕ್ಕಿಳಿದಿದ್ದು, ವಿಧಾನಸಭೆ ಸೋಲಿನ ಬಳಿಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಕಾಂಗ್ರೆಸ್‌ನಿಂದ(Congress) ಮುದ್ದಹನುಮೇಗೌಡ(S. P. Muddahanumegowda) ಕಣಕ್ಕಿಳಿದಿದ್ದಾರೆ. ಇವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಹಾಗಾಗಿ ಯಾರಿಗೆ ಗೆಲುವು ನೀಡ್ತಾರೆ ತುಮಕೂರು ಜನ  ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ:  Sam Pitroda : ಕಾಂಗ್ರೆಸ್‌ ನಾಯಕನ ಆಸ್ತಿ ಹೇಳಿಕೆ ವಿವಾದ: 'ಮಕ್ಕಳಿಗೆ ಶೇ.45ರಷ್ಟಂತೆ, ಸರ್ಕಾರಕ್ಕೆ ಶೇ.55ರಷ್ಟು ಆಸ್ತಿ'!

Video Top Stories