Asianet Suvarna News Asianet Suvarna News

ಇಂದು ಬಿಜೆಪಿ ಹೈ ವೋಲ್ಟೇಜ್ ಮೀಟಿಂಗ್: ಯತ್ನಾಳ್‌, ಸಿಟಿ ರವಿ ಹೆಸರು ಕೈ ಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನ

ಏಟ್ರಿಯಾ ಹೋಟೆಲ್‌ನಲ್ಲಿ ಬಿಜೆಪಿಯ ಮಹತ್ವದ ಸಭೆ ನಡೆಯಲಿದ್ದು, ವಿಧಾನಸಭೆ ಅಧಿವೇಶನದಲ್ಲಿ ಪಕ್ಷದ ನಿಲುವಿನ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.

ಇಂದು ಬೆಂಗಳೂರಿನಲ್ಲಿ ಬಿಜೆಪಿ ಹೈ ವೋಲ್ಟೇಜ್ ಮೀಟಿಂಗ್(BJP Meeting) ನಡೆಯಲಿದೆ. ಏಟ್ರಿಯಾ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. 
ವಿಧಾನಸಭೆ ಅಧಿವೇಶನದಲ್ಲಿ ಪಕ್ಷದ ನಿಲುವಿನ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಚಿತ್ರದುರ್ಗದಿಂದ ಪಾದಯಾತ್ರೆ ಮಾಡಲು ಯೋಚಿಸಿರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮೈಸೂರಿನಿಂದ ನಡೆಸಲು ಯೋಚಿಸಿರುವ ಪಾದಯಾತ್ರೆ ಬಗ್ಗೆಯೂ ಚರ್ಚೆ ನಡೆಯಲಿದೆ. ವಿಧಾನಸಭೆಯಿಂದ 9, ಪರಿಷತ್‌ನಿಂದ 7 ಜನರ ತಂಡ ರಚನೆಯಾಗಿದೆ. ಮಹತ್ವದ ಸಭೆ ವಿಚಾರದಲ್ಲೂ ಬಣ ರಾಜಕೀಯ ಮುಂದುವರೆದಿದೆ. ಬಿಜೆಪಿಯಲ್ಲಿ ಪರಸ್ಪರ ಕಾಲೆಳೆಯುವ ಪ್ರಕ್ರಿಯೆ ಮುಗಿದಿಲ್ಲ. ತಂಡದಲ್ಲಿ ಇಲ್ಲ ಬಿಜೆಪಿ ಪ್ರಮುಖ ನಾಯಕ ಸಿಟಿ ರವಿ (CT Ravi)ಹೆಸರು, ಸಿಟಿ ರವಿ ವಿಧಾನ ಪರಿಷತ್ ವಿಪಕ್ಷ ನಾಯಕನ ರೇಸ್‌ನಲ್ಲಿದ್ದಾರೆ. ಆದರೆ ಪಕ್ಷದ ಮಹತ್ವದ ನಿರ್ಧಾರದ ಸಭೆಗೆ ಆಹ್ವಾನ ನೀಡಿಲ್ಲ ಎನ್ನಲಾಗ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೆಸರು ಕೈ ಬಿಟ್ಟಿದ್ದಕ್ಕೂ ತೀವ್ರ ಚರ್ಚೆಯಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕೇಳಿದ ಪ್ರಶ್ನೆ ಏನು? ಇಂದಿನ ವಿಚಾರಣೆಯಲ್ಲಿ ಏನೆಲ್ಲಾ ಕೇಳಲಾಗುತ್ತೆ?

Video Top Stories