Asianet Suvarna News Asianet Suvarna News

ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕೇಳಿದ ಪ್ರಶ್ನೆ ಏನು? ಇಂದಿನ ವಿಚಾರಣೆಯಲ್ಲಿ ಏನೆಲ್ಲಾ ಕೇಳಲಾಗುತ್ತೆ?

ಇಂದು ಕೂಡ ವಿಚಾರಣೆಗೆ ಹಾಜರಾಗಲು ನಾಗೇಂದ್ರಗೆ ಬುಲಾವ್
ಇಂದು ಕೂಡ ನಾಗೇಂದ್ರ ತೀವ್ರ ವಿಚಾರಣೆ ನಡೆಸಲಿರೋ ಎಸ್ಐಟಿ
ಹಣ ವರ್ಗಾವಣೆಯಲ್ಲಿ ರೋಲ್ ಏನು ಎಂಬುದರ ಬಗ್ಗೆ ವಿಚಾರಣೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣಕ್ಕೆ( Valmiki Development Corporation scam case) ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ(Former Minister B. Nagendra) ವಿಚಾರಣೆಯನ್ನು ಎಸ್‌ಐಟಿ(SIT) ನಡೆಸಿದೆ. ಸುಮಾರು ಎಂಟು ತಾಸು ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳು ನಡೆಸಿದ್ದಾರೆ. ಸಿಐಡಿ(CID) ಕಚೇರಿಯಲ್ಲಿ ಎಸ್ಐಟಿಯಿಂದ ವಿಚಾರಣೆ ನಡೆಸಲಾಗಿದೆ. ಸುಮಾರು 30ಕ್ಕೂ ಹೆಚ್ಚು ಪ್ರಶ್ನೆಗಳನ್ನ ಎಸ್ಐಟಿ ಅಧಿಕಾರಿಗಳು ಕೇಳಿದ್ದಾರಂತೆ. ನಿನ್ನೆ ಸುಮಾರು ಅರ್ಧ ವಿಚಾರಣೆಯನ್ನು ಎಸ್‌ಐಟಿ ಮುಗಿಸಿದೆ. ಹಣ ವರ್ಗಾವಣೆಯಲ್ಲಿ ನಾಗೇಂದ್ರ ಪಾತ್ರ ಪತ್ತೆಹಚ್ಚಲು ಯತ್ನಿಸಲಾಗುತ್ತಿದೆ. ನಾಗೇಂದ್ರಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ ಎಸ್ಐಟಿ. ಇಂದು ಮೂವರು ಆರೋಪಿಗಳ ಜೊತೆ ಮುಖಾಮುಖಿ ವಿಚಾರಣೆ ನಡೆಸಲಿದೆ. ಪಿಎ ನೆಕ್ಕುಂಟಿ ನಾಗರಾಜ್, ಎಂಡಿ ಪದ್ಮನಾಭ , ಅಕೌಂಟೆಂಟ್ ಪರಶುರಾಮ್ ಜೊತೆಗೂಡಿ ವಿಚಾರಣೆಗೆ ಸಿದ್ಧತೆ ನಡೆಸಲಾಗಿದೆ. ಮೂವರು ಆರೋಪಿಗಳ ಸಮ್ಮುಖದಲ್ಲಿ ನಾಗೇಂದ್ರ ವಿಚಾರಣೆ ನಡೆಸಲು ತಯಾರಿ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಲವ್ ಲೀ ಗೆದ್ದರೂ ಬೇಸರಗೊಂಡ ಚಿಟ್ಟೆ ವಸಿಷ್ಠ ಸಿಂಹ ! ಸಿನಿಮಾವನ್ನ ಕೆಟ್ಟ ಟೈಂನಲ್ಲಿ ಬಿಡುಗಡೆ ಮಾಡಿದ್ವಿ ಎಂದ ಡೈರೆಕ್ಟರ್!

Video Top Stories