Asianet Suvarna News Asianet Suvarna News

ಬಿಜೆಪಿ ಮೊದಲ ಶಾಸಕಾಂಗ ಸಭೆ: ವಿಪಕ್ಷ ನಾಯಕನ ಆಯ್ಕೆ, ಸೋಲಿನ ಪರಾಮರ್ಶೆ ಬಗ್ಗೆ ಚರ್ಚೆ ಸಾಧ್ಯತೆ..?

ಇಂದು ಬಿಜೆಪಿಯ ಶಾಸಕಾಂಗ ಸಭೆ ಸಹ ನಡೆಯಲಿದೆ. ಈ ಸಭೆಯಲ್ಲಿ ಸೋಲಿನ ಪರಾಮರ್ಶೆ, ಕಾಂಗ್ರೆಸ್‌ ವಿರುದ್ಧದ ಹೋರಾಟದ ಬಗ್ಗೆ ಚರ್ಚೆಯಾಗಲಿದೆ.

ವಿಧಾನಸಭೆ ಚುನಾವಣೆ ಬಳಿಕ ಇಂದು ಬಿಜೆಪಿ ಮೊದಲ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ, ಕಾಂಗ್ರೆಸ್‌ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಗೆ ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎನ್ನಲಾಗ್ತಿದೆ. ಈ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಶಾಸಕ ಬಸವರಾಜ ಬೊಮ್ಮಾಯಿ,  ನಳೀನ್‌ ಕುಮಾರ್‌ ಕಟೀಲ್‌, ಬಿ.ಎಲ್‌. ಸಂತೋಷ್ ಇರಲಿದ್ದಾರೆ. ಜೊತೆಗೆ ಎಲ್ಲಾ ಶಾಸಕರು, ವಿಂಗ್‌ಗಳ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಕೇಂದ್ರದ ಪ್ರತಿನಿಧಿಯಾಗಿ ಅರುಣ್‌ ಸಿಂಗ್‌ ಪಾಲ್ಗೊಳ್ಳಲಿದ್ದಾರೆ. 

ಇದನ್ನೂ ವೀಕ್ಷಿಸಿ: ರಾಜ್ಯ ಸರ್ಕಾರದಿಂದ ಜಾತಿಗಣತಿ ಜಾರಿಗೆ ಪ್ಲ್ಯಾನ್‌: ವರದಿ ಬಿಡುಗಡೆಗೆ ಬ್ರಾಹ್ಮಣರಿಂದ ವಿರೋಧ !