Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಜಾತಿಗಣತಿ ಜಾರಿಗೆ ಪ್ಲ್ಯಾನ್‌: ವರದಿ ಬಿಡುಗಡೆಗೆ ಬ್ರಾಹ್ಮಣರಿಂದ ವಿರೋಧ !

ರಾಜ್ಯ ಸರ್ಕಾರ ಜಾತಿಗಣನೆ ವರದಿಯನ್ನು ಜಾರಿ ಮಾಡಲು ಉದ್ದೇಶಿಸಿರುವ ಬೆನ್ನಲ್ಲೇ, ವರದಿ ಬಿಡುಗಡೆಗೆ ಬ್ರಾಹ್ಮಣರಿಂದ ವಿರೋಧ ವ್ಯಕ್ತವಾಗಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಏನ್‌ ಹೇಳಿದ್ದಾರೆ ನೋಡಿ...
 

ಕಾಂತರಾಜ್‌ ನೇತೃತ್ವದಲ್ಲಿ 2015ರಲ್ಲಿ ನಡೆಸಿದ್ದ ಜಾತಿ ಗಣತಿ ಅಂಗೀಕಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಬ್ರಾಹ್ಮಣ ಸಮಾಜದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿನ ಬ್ರಾಹ್ಮಣರನ್ನು 42 ಉಪಜಾತಿಗಳಾಗಿ ವಿಂಗಡಿಸಿದ್ದು, ಇದು ತಮ್ಮ ಸಮುದಾಯವನ್ನು ಛಿದ್ರ ಮಾಡುವ ಹುನ್ನಾರ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಆರೋಪ ಮಾಡಿದ್ದಾರೆ. 42.5 ಲಕ್ಷ ಬ್ರಾಹ್ಮಣರಿದ್ದಾರೆ. ಈ ವರದಿಯಿಂದ ನಮಗೆ ತೊಂದರೆ ಆದ್ರೆ, ಉಗ್ರ ಹೋರಾಟ ಮಾಡುವುದಾಗಿ ಅವರು ಹೇಳಿದ್ದಾರೆ. ನಮಗೆ 200 ಎಂದು ಕೋಡ್‌ ನಂಬರ್ ಕೊಟ್ಟಿದ್ದಾರೆ. 42 ಉಪಜಾತಿಗಳನ್ನು ಒಂದೇ ಎಂದು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ವೀಕ್ಷಿಸಿ:Today Horoscope: ಇಂದು ಮಂಗಲ ಕಾರ್ಯಗಳಿಗೆ ಉತ್ತಮ ತಾರಾನುಕೂಲ

Video Top Stories