Asianet Suvarna News Asianet Suvarna News

'ಲೋಕ' ಗೆಲುವಿಗೆ ಬಿಜೆಪಿ ಪ್ಲಾನ್: 18 ರಾಜ್ಯಸಭಾ ಸದಸ್ಯರಿಗೆ ಟಿಕೆಟ್ ಸಾಧ್ಯತೆ ?

18 ರಾಜ್ಯಸಭಾ ಸದಸ್ಯರಿಗೆ ಲೋಕಸಭಾ ಟಿಕೆಟ್
10 ಕೇಂದ್ರ ಸಚಿವರಿಗೆ ನೇರ ಚುನಾವಣೆಗೆ ನಿಲ್ಲಲು ಸೂಚನೆ
ಕ್ಷೇತ್ರಗಳನ್ನು ಆರಿಸಿಕೊಳ್ಳಲು ಸೂಚಿಸಿರುವ ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ವಿವಿಧ ಬಗೆಯ ಕಸರತ್ತನ್ನು ಬಿಜೆಪಿ(BJP) ನಡೆಸುತ್ತಿದೆ. ಹೊಸದೊಂದು ಪ್ಲಾನ್ ಮಾಡಲು ಬಿಜೆಪಿ ಹೈಕಮಾಂಡ್ ಹೊರಟಿದೆ. ಪ್ರಭಾವಿ ಸಚಿವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಣತಂತ್ರ ರೂಪಿಸಲಾಗುತ್ತಿದೆ. ರಾಜ್ಯಸಭಾ ಸದಸ್ಯರನ್ನು ಲೋಕಸಭೆ ( Loksabha) ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದೆ ಎನ್ನಲಾಗ್ತಿದೆ. ಕೆಲವು ಕೇಂದ್ರ ಸಚಿವರಿಗೆ(Union Ministers) ಲೋಕಸಭಾ ಚುನಾವಣೆಗೆ ನಿಲ್ಲಲು ಸೂಚನೆ ನೀಡಲಾಗಿದೆ. ಪ್ರಮುಖ ಸಚಿವರು ಚುನಾವಣೆಗೆ ನಿಂತರೆ ಹೆಚ್ಚು ಲಾಭ ಇರುವ ಹಿನ್ನೆಲೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಹೆಚ್ಚಿನ ಲಾಭ ಆಗುವ ಲೆಕ್ಕಾಚಾರ ಮಾಡಲಾಗಿದೆ. ಹಾಗಾಗಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಹೈಕಮಾಂಡ್ ಇದೆ. ನಿರ್ಮಲಾ ಸೀತಾರಾಮನ್, ಪಿಯೂಶ್ ಗೊಯಲ್, ಧರ್ಮೇದ್ರ ಪ್ರಧಾನ, ಭೂಪೇಂದ್ರ ಯಾದವ್ ಕ್ಷೇತ್ರ ಆಯ್ಕೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ:  ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಎಡವಟ್ಟು: ಮನೆ ಮಾಲೀಕನ ಲೋನ್, ಬಾಡಿಗೆದಾರ ಲಾಕ್ !

Video Top Stories