ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಎಡವಟ್ಟು: ಮನೆ ಮಾಲೀಕನ ಲೋನ್, ಬಾಡಿಗೆದಾರ ಲಾಕ್ !

ಬ್ಯಾಂಕ್ ಲೋನ್ ರಿಕವರಿಗೆ ಬಂದಿದ್ದ ಸಿಬ್ಬಂದಿ
ಮನೆಯಲ್ಲಿಯೇ ಮಲಗಿದ್ದ ಬಾಡಿಗೆದಾರ
ಗಮನಿಸದೇ ಮನೆ ಸೀಜ್ ಮಾಡಿದ ಸಿಬ್ಬಂದಿ
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮನೆ ಮಾಲೀಕನೊಬ್ಬ ಲೋನ್‌(Loan) ಪಡೆದುಕೊಂಡಿದ್ದು, ಅದನ್ನು ಕಟ್ಟದ ಕಾರಣ ಬ್ಯಾಂಕ್‌ ಸಿಬ್ಬಂದಿ(bank staff) ಮನೆ ಸೀಜ್‌ ಮಾಡಿದ್ದಾರೆ. ಆದ್ರೆ ಮನೆಯೊಳಗಿದ್ದ ಬಾಡಿಗೆದಾರ ಅಲ್ಲೇ ಲಾಕ್‌(lock) ಆಗಿದ್ದಾನೆ. ಇಂತಹ ಎಡವಟ್ಟನ್ನು ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಮಾಡಿದ್ದಾರೆ. ಮನೆಯಲ್ಲಿ ಮಲಗಿದ್ದವನ್ನ ಗಮನಿಸದೇ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಈ ಘಟನೆ ಕೆಂಗೇರಿ ಪೊಲೀಸ್ ಠಾಣಾ(Kengeri Police Station) ವ್ಯಾಪ್ತಿಯಲ್ಲಿ ನಡೆದಿದೆ. ಮನೆ ಮಾಲೀಕ 2 ಕೋಟಿ ಸಾಲ ಪಡೆದಿದ್ದು, ಅದನ್ನು ಕಟ್ಟಿಲ್ಲ. ಅಲ್ಲದೇ ಕೆಂಗೇರಿ ಉಪನಗರದಲ್ಲಿ ಮೂರಂತಸ್ಥಿನ ಮನೆಯನ್ನು ಕಟ್ಟಲಾಗಿದೆ. ಕೋರ್ಟ್‌ನಿಂದ ಅನುಮತಿ ಪಡೆದು ಸಿಬ್ಬಂದಿ ಮನೆ ಸೀಜ್‌ ಮಾಡಿದ್ದಾರೆ. ಈ ಕೇಸ್‌ನನ್ನು ವಜಾ ಮಾಡಿದ್ರೂ ಸಿಬ್ಬಂದಿ ಮನೆ ಸೀಜ್‌ ಮಾಡಿದ್ದಾರೆ ಎಂದು ವಕೀಲರು ಆರೋಪ ಮಾಡಿದ್ದಾರೆ. ಮನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆಂದು ಬಾಡಿಗೆದರ ಪರ ವಕೀಲರ ಆರೋಪ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೋದಿ ಮನ್ ಕೀ ಬಾತ್ ಐಡಿಯಾ : ಬಾಳೆ ದಿಂಡಿನಿಂದ ರಸವಾಯ್ತು ಬದುಕು !

Related Video