Asianet Suvarna News Asianet Suvarna News

ಬಿಜೆಪಿಯ ಹಲವು ಹಾಲಿ ‌ಸಂಸದರಿಗೆ ಸಿಗಲ್ವಾ ಟಿಕೆಟ್ ? ಹೊಸ ಆಕಾಂಕ್ಷಿಗಳಲ್ಲಿ ಹೆಚ್ಚಿದೆ ನಿರೀಕ್ಷೆ !

ಬೆಳಗಾವಿ ‌ಲೋಕಸಭೆ ಕ್ಷೇತ್ರದ ‌ಬಿಜೆಪಿ ‌ಆಕಾಂಕ್ಷಿಗಳಲ್ಲಿ‌ ಚಿಗುರಿದ ಕನಸು
ಸಂಸದೆ‌ ಮಂಗಳಾ ‌ಅಂಗಡಿಗೂ ಈ‌ ಸಲ ‌ಟಿಕೆಟ್ ಅನುಮಾನ ಎಂಬ ಚರ್ಚೆ
ಮಂಗಳಾ ಅಂಗಡಿ ಬದಲು ಹೊಸಬರಿಗೆ ಟಿಕೆಟ್ ರಮೇಶ್ ಜಾರಕಿಹೊಳಿ

First Published Nov 21, 2023, 11:35 AM IST | Last Updated Nov 21, 2023, 11:35 AM IST

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಲವು ಹಾಲಿ ಸಂಸದರಿಗೆ ಟಿಕೆಟ್‌ ಸಿಗಲ್ಲ ಎಂಬ ಚರ್ಚೆ ನಡೆಯುತ್ತಿದೆ. ಇದರಿಂದ ಬೆಳಗಾವಿ(Belagavi) ‌ಲೋಕಸಭೆ(Lok Sabha) ಕ್ಷೇತ್ರದ ‌ಬಿಜೆಪಿ ‌ಆಕಾಂಕ್ಷಿಗಳಲ್ಲಿ‌ ಕನಸು ಚಿಗುರಿದಂತಾಗಿದೆ. ಸಂಸದೆ‌ ಮಂಗಳಾ ‌ಅಂಗಡಿಗೂ(Mangal Suresh Angadi) ಈ‌ ಸಲ ‌ಟಿಕೆಟ್ ಸಿಗುವುದು ಅನುಮಾನ ಎನ್ನಲಾಗ್ತಿದೆ. ಮಂಗಳಾ ಅಂಗಡಿ ಬದಲು ಹೊಸಬರಿಗೆ ಟಿಕೆಟ್(Ticket) ಕೊಡುವ ಸಾಧ್ಯತೆ ಇದೆ. ಬೆಳಗಾವಿ ‌ಲೋಕಸಭೆ ಕ್ಷೇತ್ರದ ಮೇಲೆ ಮಹಾಂತೇಶ ‌ಕವಟಗಿಮಠ ಕಣ್ಣಿಟ್ಟಿದ್ದಾರೆ. ಮಾಜಿ ಶಾಸಕ ಅನಿಲ್ ಬೆನಕೆ, ಸಂಜಯ್ ಪಾಟೀಲ್, ಮಹಾಂತೇಶ ಒಕ್ಕುಂದ ರೇಸ್‌ನಲಿ ಇದ್ದಾರೆ. ವಿಧಾನಸಭೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದ ಅನಿಲ್ ಬೆನಕೆ, ಸಂಜಯ್ ಪಾಟೀಲ. ವಿಧಾನಪರಿಷತ್ ಚುನಾವಣೆಯಲ್ಲಿ ಮಹಾಂತೇಶ ‌ಕವಟಗಿಮಠ ಸೋತಿದ್ದಾರೆ. ಹೊಸಬರಿಗೆ ಮಣೆ ಹಾಕಿದ್ರೆ ತಮಗೆ ಸಿಗಬಹುದೆಂಬ ಲೆಕ್ಕಾಚಾರದಲ್ಲಿ ಮಹಾಂತೇಶ ಒಕ್ಕುಂದ ಇದ್ದಾರೆ. ಮಹಾಂತೇಶ ಒಕ್ಕುಂದ ಬಿಜೆಪಿ ನೂತನ ಅಧ್ಯಕ್ಷ ‌ಬಿ.ವೈ. ವಿಜಯೇಂದ್ರ ಆಪ್ತರಾಗಿದ್ದಾರೆ. ಲೋಕಸಭೆ ‌ಚುನಾವಣೆ ಸಿದ್ಧತೆಯಲ್ಲಿ ಮೂವರು ನಾಯಕರು ಇದ್ದು, ಟಿಕೆಟ್ ‌ಸಿಗುವ ಆಶಾಭಾವನೆಯಲ್ಲಿ ಬೆನಕೆ, ಸಂಜಯ್, ಕವಟಗಿಮಠ ಇದ್ದಾರೆ.

ಇದನ್ನೂ ವೀಕ್ಷಿಸಿ:  ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ಬೆನ್ನಲ್ಲೇ ಬಂಡಾಯ! ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲವೆಂದು ಆಕ್ರೋಶ..!

Video Top Stories