Asianet Suvarna News Asianet Suvarna News

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ಬೆನ್ನಲ್ಲೇ ಬಂಡಾಯ! ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲವೆಂದು ಆಕ್ರೋಶ..!

ಬಿಜೆಪಿಯಲ್ಲಿ ಹುದ್ದೆ ಸಿಗದ ಸಮುದಾಯಗಳ ಪರಿಗಣನೆ ಸಾಧ್ಯತೆ
ಎಲ್ಲಾ ಸಮುದಾಯಗಳಿಗೂ ನ್ಯಾಯ ದೊರಕಿಸಿಕೊಡಲು ಚಿಂತನೆ
ಪ್ರಮುಖವಾಗಿ ಒಬಿಸಿ ಹಾಗೂ ದಲಿತರಿಗೆ ಸ್ಥಾನ ಕೊಡಲು ಪ್ಲ್ಯಾನ್

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ಬೆನ್ನಲ್ಲೇ ಬಿಜೆಪಿಯಲ್ಲಿ(BJP) ಬಂಡಾಯ ಶುರುವಾಗಿದ್ದು, ಬಹಿರಂಗವಾಗೇ BJP ಹಿರಿಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲವೆಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾಯಕರ ಆಕ್ರೋಶವನ್ನ ಗಂಭೀರವಾಗಿ ಬಿಜೆಪಿ ಪರಿಗಣಿಸಿದಂತೆ ಕಾಣುತ್ತಿದೆ. ಉಳಿದ 5 ಸ್ಥಾನಗಳನ್ನ ಉತ್ತರ ಕರ್ನಾಟಕ(Uttara Karnataka) ಭಾಗಕ್ಕೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಬಿಜೆಪಿ ಪಾಳಯದಲ್ಲಿ ಗಂಭೀರವಾದ ಚಿಂತನೆ ನಡೆಸಲಾಗುತ್ತಿದೆ. ವಿಧಾನಸಭೆ ಉಪನಾಯಕ(Legislative Assembly Deputy Leader) ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಕೇಳಿಬರುತ್ತಿದೆ. ಅಶೋಕ್‌ಗೆ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಬೆಲ್ಲದ್, ಇದೀಗ ಬೆಲ್ಲದ್‌ಗೆ ಉಪನಾಯಕ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಪರಿಷತ್ ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕ ಭಾಗಕ್ಕೆ? ಉತ್ತರ ಕರ್ನಾಟಕದ ನಾಯಕರಿಗೆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಹಿರಿಯರ ಬಂಡಾಯದ ಬಳಿಕ ರಘುನಾಥ್ರಾವ್ ಮಲ್ಕಾಪುರೆ ರೇಸ್‌ನಲ್ಲಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಎಲ್ಲಾ ಹುದ್ದೆ ಭರ್ತಿಗೆ ಸಭೆ ನಡೆಸುವ ಸಾಧ್ಯತೆ ಇದ್ದು, ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಎಲ್ಲಾ ಹುದ್ದೆಗಳು ಭರ್ತಿಯಾಗುವ ಸಾಧ್ಯತೆ ಇದೆ. ಶೀಘ್ರದಲ್ಲೇ ಸಭೆ ಮಾಡಿ ಹೈಕಮಾಂಡ್‌ಗೆ ಪಟ್ಟಿ ರವಾನೆ ಮಾಡುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ:  ನಿಗಮ ಮಂಡಳಿ‌ ನೇಮಕ ವಿಚಾರದಲ್ಲಿ ಸಿಎಂ ವರ್ಸಸ್ ಡಿಸಿಎಂ..ಇಂದು ಅಂತಿಮಗೊಳ್ಳುತ್ತಾ ನೇಮಕ..?

Video Top Stories