ಬಿಜೆಪಿ ಶಾಸಕರು ಸದನಕ್ಕೆ ಗೈರಾಗುವ ಸಾಧ್ಯತೆ: ಶಾಸಕರ ಸಭೆ ಕರೆದ ಹೆಚ್‌ಡಿಕೆ

ಇಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಇಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. 

First Published Jul 20, 2023, 9:15 AM IST | Last Updated Jul 20, 2023, 9:15 AM IST

ವಿಧಾನಸಭೆ ಅಧಿವೇಶನದಲ್ಲಿ ಐಎಎಸ್‌ ಅಧಿಕಾರಿಗಳನ್ನು(IAS Officers) ದುರುಪಯೋಗ ಪಡಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲ ಉಂಟಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ  ಸದನದ ಬಾವಿ ಮತ್ತು ಸಭಾಧ್ಯಕ್ಷರ ಪೀಠದ ಬಳಿಗೆ ನುಗ್ಗಿ ಪೇಪರ್ ಗಳನ್ನು ಬಿಜೆಪಿ ಸದಸ್ಯರು ಹರಿದಿದ್ದಾರೆ. ಹಾಗಾಗಿ ಅವರನ್ನು ಬಜೆಟ್‌ ಅಧಿವೇಶನ (Budget Session) ಮುಗಿಯುವವರೆಗೆ ಸದನದಿಂದ ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ಬಿಜೆಪಿ(BJP) ನಡೆಸಿದ ಹೋರಾಟಕ್ಕೆ ಜೆಡಿಎಸ್‌ ಸಾಥ್‌ ನೀಡಿತ್ತು. ಇಂದು ಜೆಡಿಎಸ್‌ (JDS) ಇದಕ್ಕೆ ಸಾಥ್‌ ನೀಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ(H.D. Kumaraswamy) ಶಾಸಕಾಂಗ ಸಭೆಯನ್ನು(Legislative Assembly meeting) ಕರೆದಿದ್ದಾರೆ. ಇಂದು ಬಿಜೆಪಿ ಸದನವನ್ನು ಬಹಿಷ್ಕರಿಸುವ ಸಾಧ್ಯತೆ ಇದೆ. ಇದಕ್ಕೆ ಬೆಂಬಲ ನೀಡಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆಗೂ ಚರ್ಚಿಸಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Today Rashibhavishy: ಇಂದು ಆಶ್ಲೇಷ ನಕ್ಷತ್ರವಿದ್ದು, ವಿಷ ಜಂತುಗಳಿಂದ ತೊಡಕು ಸಾಧ್ಯತೆ

Video Top Stories