Today Rashibhavishy: ಇಂದು ಆಶ್ಲೇಷ ನಕ್ಷತ್ರವಿದ್ದು, ವಿಷ ಜಂತುಗಳಿಂದ ತೊಡಕು ಸಾಧ್ಯತೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Jul 20, 2023, 8:41 AM IST | Last Updated Jul 20, 2023, 8:41 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ತೃತೀಯ ತಿಥಿ, ಆಶ್ಲೇಷ ನಕ್ಷತ್ರ.

ಆಶ್ಲೇಷ ನಕ್ಷತ್ರ ದಿನ ಸ್ವಲ್ಪ ಸರ್ಪ ಹಾಗೂ ವಿಷ ಜಂತುಗಳ ಭಯವನ್ನು ಸೂಚಿಸುತ್ತದೆ. ಆದ್ರೆ ಇದು ಕೆಡುಕಿನ ನಕ್ಷತ್ರವಲ್ಲ. ಈ ದಿನ ನಾಗನ ಆರಾಧನೆ ಮಾಡಿ. ಸುಬ್ರಹ್ಮಣ್ಯ ಸ್ವಾಮಿಗೆ ಇಂದು ಪಂಚಾಭಿಷೇಕ ಮಾಡುವುದರಿಂದ ತೊಡಕುಗಳಿಂದ ದೂರ ಇರಬಹುದು. ವಿಶೇಷವಾಗಿ ಹಾಲಿನ ಅಥವಾ ಎಳನೀರು ಅಭಿಷೇಕವನ್ನು ಮಾಡಿಸಿ. 

ಇದನ್ನೂ ವೀಕ್ಷಿಸಿ:  ಸದನದೊಳಗೆ ಬಿಜೆಪಿ ಪ್ರತಿಭಟನೆ ಕೋಲಾಹಲ, ಹೊರಗೆ ಕಾಂಗ್ರೆಸ್ ಜಾತಿ ರಾಜಕೀಯ!