Asianet Suvarna News Asianet Suvarna News

ತೆಲಂಗಾಣದಲ್ಲಿ ಸಿಎಂ ರೇಸ್‌ನಲ್ಲಿ ರೇವಂತ್‌ ರೆಡ್ಡಿ V/S ಉತ್ತಮ್‌ ರೆಡ್ಡಿ ? ಯಾರಿಗೆ ಪಟ್ಟ ?

ತೆಲಂಗಾಣದಲ್ಲಿ ಕಾಂಗ್ರೆಸ್ ಕಮಾಲ್,BRS ಕಂಗಾಲ್
ಫಲನೀಡಿದ ಕರ್ನಾಟಕ ಸಚಿವರ ಒಗ್ಗಟ್ಟಿನ ಹೋರಾಟ
ಅಂದು ಎಬಿವಿಪಿ ಸದಸ್ಯ.. ಇಂದು ತೆಲಂಗಾಣ ಸಿಎಂ!

ಇನ್ನೂ ಭಾರಿ ಕುತೂಹಲ ಮೂಡಿಸಿದ್ದ ಪಂಚ ರಾಜ್ಯ ಚುನಾವಣೆ(5 State Assembly Election) ಸುಸೂಕ್ತವಾಗಿ ಮುಗಿದು 4 ರಾಜ್ಯಗಳ ಫಲಿತಾಂಶವು ಬಂದಿದೆ.ಇದೀಗ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌(DCM D.K. Shivakumar) ನೇತೃತ್ವದಲ್ಲಿ ತೆಲಂಗಾಣ(Telangana) ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಸರ್ಕಾರ ರಚನೆಗೆ ಹಕ್ಕನ್ನು ತೆಲಂಗಾಣ ಕಾಂಗ್ರೆಸ್‌ ಮಂಡಿಸಿದೆ. ಇಂದು ತೆಲಂಗಾಣ ಕಾಂಗ್ರೆಸ್‌(Congress) ಶಾಸಕಾಂಗ ಸಭೆ ನಡೆಯಲಿದೆ. ಅಲ್ಲದೇ ಸಿಎಂ ರೇಸ್‌ನಲ್ಲಿ ರೇವಂತ್‌ ರೆಡ್ಡಿ ಮತ್ತು ಉತ್ತಮ್‌ ರೆಡ್ಡಿ ಇದ್ದಾರೆ. ಕರ್ನಾಟಕ ಬಳಿಕ ತೆಲಂಗಾಣದಲ್ಲಿ ‘ಗ್ಯಾರಂಟಿ’ ಗೆಲುವು ಸಿಕ್ಕಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಜಯ ದೊರೆತಿದೆ. ಸಿಎಂ ಕೆ.ಸಿ.ಆರ್ ಕೋಟೆಯನ್ನು ರೇವಂತ್ ರೆಡ್ಡಿ ಭೇದಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಡಿ.6ಕ್ಕೆ ಇಂಡಿಯಾ ಮೈತ್ರಿಕೂಟದ ಸಭೆ: 4 ರಾಜ್ಯಗಳ ಫಲಿತಾಂಶದಿಂದ ನಿಟ್ಟುಸಿರು ಬಿಟ್ಟಿತಾ ಬಿಜೆಪಿ ?