Asianet Suvarna News Asianet Suvarna News

ಡಿ.6ಕ್ಕೆ ಇಂಡಿಯಾ ಮೈತ್ರಿಕೂಟದ ಸಭೆ: 4 ರಾಜ್ಯಗಳ ಫಲಿತಾಂಶದಿಂದ ನಿಟ್ಟುಸಿರು ಬಿಟ್ಟಿತಾ ಬಿಜೆಪಿ ?

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್‌ ಗ್ಯಾರಂಟಿ ವಿರುದ್ಧ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.

ಮುಂದಿನ ಲೋಕಸಭೆ ಚುನಾವಣೆಗೆ ಮುನ್ನುಡಿ ಎನ್ನಲಾಗುತ್ತಿದ್ದ ಪಂಚರಾಜ್ಯ ಚುನಾವಣೆಯ ಫಲಿತಾಂಶ(5 State Assembly Election Results) ಸಧ್ಯದ ಮಟ್ಟಿಗೆ ಬಿಜೆಪಿ ಫೇವರ್ ಆಗಿದೆ. ಭಾನುವಾರ ನಾಲ್ಕು ರಾಜ್ಯದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 3 ಕಾಂಗ್ರೆಸ್ 1 ಕಡೆ ಗೆಲುವು ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಫಲಿತಾಂಶ ಮುಂದಿನ ಮಹಾಭಾರತ ಕುರುಕ್ಷೇತ್ರದ ಸಂದೇಶ ಕೊಟ್ಟಿದೆ. ಇನ್ನೂ ಮೂರು ರಾಜ್ಯಗಳ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌(Congress) ಹೊಸ ಲೆಕ್ಕಚಾರ ಹಾಕಲು ಶುರುಮಾಡಿದೆ. ಡಿಸೆಂಬರ್‌ 6ಕ್ಕೆ ಇಂಡಿಯಾ ಮೈತ್ರಿಕೂಟದ(INDIA Alliance) ಮಹತ್ವದ ಸಭೆ ನಡೆಯಲಿದೆ. ಇನ್ನೂ ಈ ಫಲಿತಾಂಶದಿಂದ ಬಿಜೆಪಿ ನಿಟ್ಟುಸಿರು ಬಿಟ್ಟಂತೆ ಕಾಣುತ್ತದೆ. ಅಲ್ಲದೇ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ ಎಚ್ಚರಿಕೆ ಸಂದೇಶ ಕೊಟ್ಟಂತೆ ಆಗಿದೆ. 

ಇದನ್ನೂ ವೀಕ್ಷಿಸಿ:  ನಡುರಸ್ತೆಯಲ್ಲೇ ಚಿಕ್ಕಪ್ಪನಿಗೆ ಬೆಂಕಿ ಹಚ್ಚಿದ ಮಕ್ಕಳು.. ಪೆಟ್ರೋಲ್ ಹಾಕಿ ಸುಟ್ಟುಹಾಕಿದ ಕ್ರೂರಿಗಳು !

Video Top Stories