ಮನಮೋಹನ ಸಿಂಗ್ ಶೋಕಾಚರಣೆ ವೇಳೆ ವಿದೇಶ ಪ್ರವಾಸ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ರಾಹುಲ್ ಫಾರಿನ್‌ ಟೂರ್!

ರಾಹುಲ್ ಗಾಂಧಿ ಹೊಸ ವರ್ಷಾಚರಣೆಗಾಗಿ ವಿಯೆಟ್ನಾಂಗೆ ಹೋಗಿದ್ದಾರೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ರು. ಡಾ ಮನಮೋಹನ್ ಸಿಂಗ್ ಶೋಕಾಚರಣೆಗಿಂತ ಹೊಸ ವರ್ಷಕ್ಕೆ ಪಾರ್ಟಿ ಮಾಡುವುದೇ ಮುಖ್ಯನಾ ಎಂದು ಪ್ರಶ್ನೆ ಮಾಡಿದ್ರು. ಅದಾದ ಬೆನ್ನಲ್ಲೇ ಕಾಂಗ್ರೆಸ್​ ನಾಯಕರು ಕೂಡ ರಾಹುಲ್ ವಿದೇಶ ಪ್ರವಾಸ ಖಚಿತಪಡಿಸಿದ್ದು ಬಿಜೆಪಿಗೆ ಕೌಂಟರ್​ ಕೊಟ್ಟಿದ್ದಾರೆ.

First Published Dec 31, 2024, 9:07 AM IST | Last Updated Dec 31, 2024, 9:08 AM IST

ಬೆಂಗಳೂರು(ಡಿ.31): ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಮ್ಮೆಲ್ಲರನ್ನ ಅಗಲಿ ಇಂದಿಗೆ 4 ದಿನ. ದೇಶದಲ್ಲಿ 7 ದಿನ ಶೋಕಾಚರಣೆ ನಡೆಯುತ್ತಿದೆ. ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಇಂದೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರಕ್ಕಾಗಿಯೇ ಬಿಜೆಪಿ-ಕಾಂಗ್ರೆಸ್​ ಮಧ್ಯೆ ಜಟಾಪಟಿ ಮುಂದುವರಿದೆ.

ದೆಹಲಿಯ ನಿಗಮ್‌ಬೋಧ್‌ ಘಾಟ್‌ನಲ್ಲಿ ಡಾ. ಸಿಂಗ್ ಅಂತ್ಯಕ್ರಿಯೆ ನಡೆಸಿದ್ದಕ್ಕೆ ಕಾಂಗ್ರೆಸ್ ನಾಯಕರು ಕೆಂಡಕಾರಿದ್ರು.. ಈಗ ದೇಶದಲ್ಲಿ ಶೋಕಾಚರಣೆ ಇರುವಾಗಲೇ ರಾಹುಲ್ ವಿದೇಶ ಪ್ರವಾಸ ಬಿಜೆಪಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.
ರಾಹುಲ್ ಗಾಂಧಿ ಹೊಸ ವರ್ಷಾಚರಣೆಗಾಗಿ ವಿಯೆಟ್ನಾಂಗೆ ಹೋಗಿದ್ದಾರೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ರು. ಡಾ ಮನಮೋಹನ್ ಸಿಂಗ್ ಶೋಕಾಚರಣೆಗಿಂತ ಹೊಸ ವರ್ಷಕ್ಕೆ ಪಾರ್ಟಿ ಮಾಡುವುದೇ ಮುಖ್ಯನಾ ಎಂದು ಪ್ರಶ್ನೆ ಮಾಡಿದ್ರು. ಅದಾದ ಬೆನ್ನಲ್ಲೇ ಕಾಂಗ್ರೆಸ್​ ನಾಯಕರು ಕೂಡ ರಾಹುಲ್ ವಿದೇಶ ಪ್ರವಾಸ ಖಚಿತಪಡಿಸಿದ್ದು ಬಿಜೆಪಿಗೆ ಕೌಂಟರ್​ ಕೊಟ್ಟಿದ್ದಾರೆ.

ಬಂಗಾರದ ಮೇಲೆ ಸಾಲ ನೀಡುವ ಮುತ್ತೂಟ್‌ ಫೈನಾನ್ಸ್‌ಗೆ ಮೋಸ ಮಾಡಿದ ಮ್ಯಾನೇಜರ್‌!

‘ಕಾಂಗ್ರೆಸ್ ಸಿಖ್ ದ್ವೇಷಿಗಳು’

ರಾಹುಲ್ ವಿದೇಶ ಪ್ರವಾಸಕ್ಕೆ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವೀಯಾ ಗುಡುಗಿದ್ದು, ಡಾ.ಮನಮೋಹನ್​ ಸಿಂಗ್ ನಿಧನಕ್ಕೆ ದೇಶ ಶೋಕಾಚರಣೆ ನಡೆಸುತ್ತಿದೆ. ಆದ್ರೆ ಹೊಸ ವರ್ಷಾಚರಣೆಗೆ ರಾಹುಲ್ ಗಾಂಧಿ ವಿಯೆಟ್ನಾಂಗೆ ಹಾರಿದ್ದಾರೆ. ಇದು ಡಾ. ಸಿಂಗ್ ಬಗ್ಗೆ ರಾಹುಲ್ ಗಾಂಧಿ ಅವರಿಗಿರುವ ತಿರಸ್ಕಾರದ ಪ್ರತೀಕ. ಡಾ.ಸಿಂಗ್ ಸಾವನ್ನು ರಾಹುಲ್ ರಾಜಕೀಯ ಲಾಭಕ್ಕೆ ಬಳಸಿಕೊಂಡ್ರು. ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಸಿಖ್‌ರನ್ನು ದ್ವೇಷಿಸುತ್ತದೆ ಎಂದಿದ್ದಾರೆ. 

‘ಹೊಸ ವರ್ಷದಲ್ಲಾದ್ರೂ ಸರಿಯಾಗಿ’

ಅಮಿತ್ ಮಾಳವೀಯಾ ಟ್ವೀಟ್​ಗೆ ತಿರುಗೇಟು ನೀಡಿದ ಕಾಂಗ್ರೆಸ್​ ಸಂಸದ ಮಾಣಿಕ್ಯಂ ಠಾಗೋರ್, ತಿರುಚುವ ರಾಜಕೀಯವನ್ನೂ ಸಂಘಿಗಳು ಯಾವಾಗ ನಿಲ್ಲಿಸುತ್ತಾರೆ. ಯಮುನಾ ದಡದಲ್ಲಿ ಡಾ.ಸಿಂಗ್ ಅಂತ್ಯಸಂಸ್ಕಾರಕ್ಕೆ ಪ್ರಧಾನಿ ನಿರಾಕರಿಸಿದ್ರು. ರಾಹುಲ್ ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ ಹೋದ್ರೆ ನಿಮಗೇನು ಸಮಸ್ಯೆ.. ಹೊಸ ವರ್ಷದಲ್ಲಿಯಾದರೂ ಸರಿಯಾಗಿ ಎಂದಿದ್ದಾರೆ.

ನನ್ನ ಬದ್ಧತೆ ಬಗ್ಗೆ ಪ್ರಶ್ನೆ ಮಾಡಬೇಡಿ, ಮೋದಿ ಹೆಸರಲ್ಲಿ ರಾಜಕೀಯಕ್ಕೆ ಬಂದವನು ನಾನು: ಪ್ರತಾಪ್‌ ಸಿಂಹ

ನಿಗಮ್‌ಬೋಧ್‌ ಘಾಟ್‌ನಲ್ಲಿ ಡಾ.ಸಿಂಗ್ ಅಂತ್ಯಕ್ರಿಯೆ ಸರಿನಾ

ನಿಗಮ್ ಬೋಧ್ ಘಾಟ್‌ನಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ ನಡೆದಿದ್ದು, ನೀವು ಎಂದಾದರೂ ಕೇಳಿದ್ದೀರಾ ಎಂದು ಕಾಂಗ್ರೆಸ್‌ ನಾಯಕ ಪವನ್ ಖೇರಾ ಪ್ರಶ್ನಿಸಿದ್ದಾರೆ. ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲು ಜಾಗ ನೀಡಬಹುದಿತ್ತು. ಆದ್ರೆ ಕೇಂದ್ರ ಸರ್ಕಾರ ಜಾಗವನ್ನ ನೀಡಲಿಲ್ಲ ಅಂತ ಆರೋಪಿಸಿದ್ರು. ಈ ಆರೋಪಕ್ಕೆ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ, ಕಾಂಗ್ರೆಸ್ ಕೊಳಕು ರಾಜಕೀಯ ಮಾಡ್ತಿದೆ ಅಂತ ತಿರುಗೇಟು ನೀಡಿದ್ರು. 

ರಾಜ್‌ಘಾಟ್‌ಗೆ ಅಧಿಕಾರಿಗಳ ಭೇಟಿ, ಸ್ಮಾರಕ ಸ್ಥಳ ಪರಿಶೀಲನೆ

ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಸ್ಮಾರಕ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಜಟಾಪಟಿ ಮುಂದುವರಿದಿದೆ. ಈ ನಡುವೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಅಧಿಕಾರಿಗಳು ರಾಜ್‌ಘಾಟ್‌ಗೆ ಭೇಟಿ ನೀಡಿ ಸ್ಮಾರಕ ನಿರ್ಮಾಣಕ್ಕಾಗಿ ಜಾಗ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ.