ನನ್ನ ಬದ್ಧತೆ ಬಗ್ಗೆ ಪ್ರಶ್ನೆ ಮಾಡಬೇಡಿ, ಮೋದಿ ಹೆಸರಲ್ಲಿ ರಾಜಕೀಯಕ್ಕೆ ಬಂದವನು ನಾನು: ಪ್ರತಾಪ್‌ ಸಿಂಹ

ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವಂತೆ ಪ್ರತಾಪ್ ಸಿಂಹ ಒತ್ತಾಯಿಸಿದ್ದು, ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಸೇರ್ಪಡೆ ವದಂತಿಗಳನ್ನು ತಳ್ಳಿಹಾಕಿರುವ ಸಿಂಹ, ಸೈದ್ಧಾಂತಿಕ ಬದ್ಧತೆ ಹೊಂದಿರುವುದಾಗಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.30): ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಒತ್ತಾಯ ವಿಚಾರದಲ್ಲಿ ಪ್ರತಾಪ್​ ಸಿಂಹ ವಿರುದ್ಧ ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, 'ನಾನು ಕಾಂಗ್ರೆಸ್‌ಗೆ ಹೋಗ್ತೀನಿ ಎಂದು ಹೇಳುತ್ತಿದ್ದಾರೆ. ಮೋದಿ ಹೆಸರಿನಲ್ಲಿ ನಾನು ರಾಜಕೀಯಕ್ಕೆ ಬಂದವನು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ನಾನು ಸೈದ್ದಾಂತಿಕ ಬದ್ಧತೆಯಿಂದ ಬಂದವನು' ಎಂದು ಹೇಳಿದ್ದಾರೆ.

ಪ್ರತಾಪ ಸಿಂಹ ಬಕೆಟ್‌ ಹಿಡಿಯುವುದು ಯಾವ ಉದ್ದೇಶಕ್ಕೆ: ರಘು ಕೌಟಿಲ್ಯ ಪ್ರಶ್ನೆ

ಕಳೆದ ಚುನಾವಣೆಯಲ್ಲೇ ಕಾಂಗ್ರೆಸ್‌​ನಿಂದ ಆಫರ್​ ಬಂದಿತ್ತು. ರಾಜಕಾರಣದಲ್ಲಿ ನೇರವಂತಿಕೆಗೆ ಬೆಲೆ ಇಲ್ಲ. ಮೈಸೂರಿನ ಯಾವುದಾದರೂ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಿ. ಇಲ್ಲ ಮುಡಾದ ಹೊಸ ಬದಲಾವಣೆಗೆ ಸಿದ್ದರಾಮಯ್ಯ ಹೆಸರಿಡಿ ಎಂದು ಮೈಸೂರು ಮಾಜಿ ಸಂಸದ ಪ್ರತಾಪ್‌ ಸಿಂಹ ಒತ್ತಾಯಿಸಿದ್ದಾರೆ.

Related Video