ಬಂಗಾರದ ಮೇಲೆ ಸಾಲ ನೀಡುವ ಮುತ್ತೂಟ್‌ ಫೈನಾನ್ಸ್‌ಗೆ ಮೋಸ ಮಾಡಿದ ಮ್ಯಾನೇಜರ್‌!

ಧಾರವಾಡದ ಮತ್ತೂಟ್‌ ಫೈನಾನ್ಸ್‌ನಲ್ಲಿ ಮ್ಯಾನೇಜರ್‌ ಸೇರಿದಂತೆ ನಾಲ್ವರ ಬಂಧನ. ಗೋಲ್ಡ್‌ ಹರಾಜು ಹೆಸರಿನಲ್ಲಿ 14 ಜನರಿಂದ 65 ಲಕ್ಷ ವಂಚನೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.30): ಮತ್ತೂಟ್‌ ಫೈನಾನ್ಸ್‌ನಲ್ಲಿ ಬಂಗಾರದ ಆಭರಣಗಳನ್ನ ಅಡವಿಡುವಾಗ ಎಚ್ಚರ ಎಚ್ಚರ ಎಚ್ಚರ. ಬೇಲಿಯೇ ಎದ್ದು ಹೊಲವನ್ನ ಮೇಯ್ದಂತಾಗಿದೆ ಮತ್ತೂಟ್‌ ಫೈನಾನ್ಸ್‌ ಕಂಪನಿ ಕಥೆ. ಕಂಪನಿಯ ಕಿಲಾಡಿ ಮ್ಯಾನೇಜರ್‌ ಒಂದೂವರೆ ಕೋಟಿಗೂ ಹೆಚ್ಚು ವಂಚನೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.

ಧಾರವಾಡ ನಗರದಲ್ಲಿ ಟಿಪ್ಪುಸರ್ಕಲ್ ಬಳಿ ಇರುವ ಮತ್ತೂಟ್‌ ಫೈನಾನ್ಸ್‌ ಖಾತೆಯಲ್ಲಿ ಈ ಪ್ರಕರಣ ನಡೆದಿದೆ. ಫೈನಾನ್ಸ್‌ನ ಮ್ಯಾನೇಜರ್ ಮೊಹಮದ್‌ ಯಾಸಿನ್ ಚಾಂದಖಾನ್ ಮತ್ತು ಅವನ ಆಪ್ತ ಗ್ರಾಹಕರಿಂದ ಫೈನಾನ್ಸ್‌ ಕಂಪನಿಗೆ ವಂಚನೆ ಮಾಡಲಾಗಿದೆ.

ನನ್ನ ಬದ್ಧತೆ ಬಗ್ಗೆ ಪ್ರಶ್ನೆ ಮಾಡಬೇಡಿ, ಮೋದಿ ಹೆಸರಲ್ಲಿ ರಾಜಕೀಯಕ್ಕೆ ಬಂದವನು ನಾನು: ಪ್ರತಾಪ್‌ ಸಿಂಹ

ಕಂಪನಿಯ ವಲಯ ಮುಖ್ಯಸ್ಥ ಪ್ರಸನ್ನಕುಮಾರ ಎಂಬುವರಿಂದ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಫೈನಾನ್ಸ್‌ನ ಗೋಲ್ಡ್‌ ಹರಾಜು ಮಾಡಲಾಗುವುದು ಎಂದು ಸುಳ್ಳು ಹೇಳಿ 14 ಜನರಿಂದ 65 ಲಕ್ಷ ಹಣವನ್ನ ಡಿಪಾಸಿಟ್‌ ಅನ್ನು ಮ್ಯಾನೇಜರ್ ಕಟ್ಟಿಸಿಕೊಂಡಿದ್ದರು.

Related Video